ನಟ ದರ್ಶನ್ ಗೆ ಇಷ್ಟದ ಊಟ ನೀಡಲು ಕ್ಯೂ ನಿಂತಿದ್ದಾರಾ ರೌಡಿಗಳು

Krishnaveni K
ಶನಿವಾರ, 3 ಆಗಸ್ಟ್ 2024 (11:58 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಈಗ ಊಟ ಕೊಡಲು ಜೈಲಿನಲ್ಲಿರುವ ಕುಖ್ಯಾತ ರೌಡಿಗಳು ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಮಾಂಸಾಹಾರ ಪ್ರಿಯ. ಒಂದು ದಿನವೂ ಮಾಂಸಾಹಾರವಿಲ್ಲದೇ ಊಟ ಮಾಡಿದವರಲ್ಲ. ಆದರೆ ಈಗ ಜೈಲಿನಲ್ಲಿ ಇತರೆ ಕೈದಿಗಳಿಗೆ ನೀಡುವ ಸಪ್ಪೆ ಆಹಾರವನ್ನೇ ಅವರಿಗೂ ನೀಡಲಾಗುತ್ತಿದೆ. ವಾರಕ್ಕೊಂದು ಬಾರಿ ಮಾತ್ರ ಜೈಲಿನ ಮೆನುವಿನಂತೆ ಮಾಂಸಾಹಾರ ನೀಡಲಾಗುತ್ತಿದೆ.

ಆದರೆ ದರ್ಶನ್ ಸೇವೆ ಮಾಡಲು ಜೈಲಿನಲ್ಲಿರುವ ಕುಖ್ಯಾತ ರೌಡಿಗಳು ಸಾಲುಗಟ್ಟಿ ನಿಂತಿದ್ದಾರಂತೆ. ಅವರಿಗೆ ವಿಸಿಟರ್ ಗಳು ನೀಡುವ ಮಾಂಸಾಹಾರವನ್ನು ದರ್ಶನ್ ಗೆ ತಲುಪಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಾಂಸಾಹಾರಕ್ಕಾಗಿ ಪರಿತಪಿಸುತ್ತಿರುವ ದರ್ಶನ್ ಗೆ ಜೈಲಿನಲ್ಲಿರುವ ರೌಡಿಗಳೇ ಸಹಾಯ ಮಾಡುತ್ತಿದ್ದಾರಂತೆ.

ಸದ್ಯಕ್ಕೆ ದರ್ಶನ್ ವಿಐಪಿ ಸೆಲ್ ನಲ್ಲಿ ಏಕಾಂಗಿಯಾಗಿದ್ದಾರೆ. ಅವರ ಸೆಲ್ ಪಕ್ಕದಲ್ಲಿ ಕೆಲವು ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದರೂ ಕೋರ್ಟ್ ನಿಂದ ದರ್ಶನ್ ಗೆ ಅನುಮತಿ ಸಿಕ್ಕಿಲ್ಲ. ಇದರ ನಡುವೆ ಆಗಸ್ಟ 14 ರವರೆಗೂ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರಾ ಅಧ್ಯಾಯ 1 ನೋಡಿ ನಟ ರಿಷಭ್ ಶೆಟ್ಟಿ ಬಗ್ಗೆ ಪದಗಳಲ್ಲಿ ವರ್ಣಿಸಿದ ನಟ ಯಶ್‌

BB Season12: ಬಿಗ್‌ಬಾಸ್‌ನಲ್ಲಿ ಹೊಸ ರಾಜಹುಲಿ ಕಾಟಕ್ಕೆ ಸುಸ್ತಾದ ಅಶ್ವಿನಿ ಗೌಡ

ಬರ್ತ್ ಡೇ ದಿನವೇ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ರು ರಚಿತಾ ರಾಮ್

ಹೊಂಬಾಳೆ ಫಿಲಂಸ್ ನಿಂದ ಮಹತ್ವದ ಪ್ರಕಟಣೆ: ಕಾಂತಾರ ಸಿನಿಮಾ ವಿಡಿಯೋ ಹಾಕುತ್ತಿರುವವರು ಗಮನಿಸಿ

IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments