ಬೆಂಗಳೂರು: ಗೌರಿ, ಗಣೇಶ ಹಬ್ಬಕ್ಕೆ ಶುಭ ಕೋರಿರುವ ರಾಕಿಂಗ್ ಸ್ಟಾರ್ ಯಶ್ ಶುಭಾಷಯಗಳ ಜತೆಗೆ ಅಭಿಮಾನಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೊರೋನಾ ವ್ಯಾಪಕವಾಗಿರುವ ಕಾರಣ ಹಬ್ಬ ಮಾಡಿ ಆದರೆ, ಎಂದಿನಂತೆ ಗೌಜಿ ಗದ್ದಲವಿಲ್ಲದೇ ಆಚರಿಸಿ ಎಂದು ಮನವಿ ಮಾಡಿದ್ದಾರೆ.
ಈ ಬಾರಿ ಪ್ರತೀ ಬಾರಿಯಂತೆ ಅದ್ಧೂರಿಯಾಗಿ ಹಬ್ಬ ಮಾಡಲು ಸಾಧ್ಯವಾಗದು. ಆದರೆ ನಮ್ಮ ಸ್ಪೂರ್ತಿ ಹಾಗೇ ಇರಲಿ. ಕುಟುಂಬದವರ ಜತೆ ಖುಷಿಯಾಗಿ ಹಬ್ಬ ಆಚರಿಸಿ, ಮೋದಕ ಎಂಜಾಯ್ ಮಾಡಿ ಎಂದು ಯಶ್ ಹಾರೈಸಿದ್ದಾರೆ.