Publish Date: Sat, 02 Jul 2022 (08:40 IST)
Updated Date: Sat, 02 Jul 2022 (09:19 IST)
ಹೈದರಾಬಾದ್: ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಬಗ್ಗೆ ಇದುವರೆಗೆ ಅಧಿಕೃತವಾಗಿ ಸುದ್ದಿ ಕೊಟ್ಟಿಲ್ಲ. ಅವರ ಅಭಿಮಾನಿಗಳೂ ಇದಕ್ಕಾಗಿ ಕಾಯುತ್ತಿದ್ದಾರೆ.
ಈ ನಡುವೆ ರಾಕಿ ಭಾಯಿ ಯಶ್ ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.
ಹೊಂಬಾಳೆ ಫಿಲಂಸ್ ಜೊತೆಗೆ ಯಶ್ ಗೆ ಉತ್ತಮ ಬಾಂಧವ್ಯವಿದೆ. ಅಲ್ಲದೆ, ಪ್ರಭಾಸ್ ಜೊತೆಗೂ ಸ್ನೇಹ ಸಂಬಂಧವಿದೆ. ಇದೀಗ ಸಲಾರ್ ಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಉದ್ದೇಶದಿಂದ ವಿಶೇಷ ಪಾತ್ರದಲ್ಲಿ ಯಶ್ ರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ.