Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮ್ಮ ಕಾರ್ ನ ನಂಬರ್ ಪ್ಲೇಟ್ ಗಾಗಿಯೇ ರಾಕಿಂಗ್ ಸ್ಟಾರ್ ಯಶ್ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ

Yash car

Krishnaveni K

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (09:23 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗ ಭಾರತದ ಬಹುಬೇಡಿಕೆಯ ನಟ. ಕೇವಲ ದಕ್ಷಿಣ ಭಾರತ ಮಾತ್ರವಲ್ಲ, ಬಾಲಿವುಡ್ ನಲ್ಲೂ ಅವರಿಗೆ ಬೇಡಿಕೆಯಿದೆ. ಇಂತಿಪ್ಪ ಯಶ್ ಬಳಿ ಈಗ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳೂ ಇವೆ.

ರಾಕಿ ಭಾಯಿ ಬಳಿ 5 ಕೋಟಿ ಬೆಲೆ ಬಾಳುವ ಐಷಾರಾಮಿ ರೇಂಜ್ ರೋವರ್ ಕಾರಿದೆ. ಯಶ್ ಎಲ್ಲೇ ಓಡಾಡುವುದಿದ್ದರೂ ಈ ಕಾರಿನಲ್ಲೇ ಸಾಮಾನ್ಯವಾಗಿ ಓಡಾಡುತ್ತಾರೆ. ಅಂದ ಹಾಗೆ ಈ ಕಾರಿನ ನಂಬರ್ ಪ್ಲೇಟ್ ನಲ್ಲಿಯೂ ಒಂದು ವಿಶೇಷತೆಯಿದೆ. ಈ ನಂಬರ್ ಪ್ಲೇಟ್ ಗಾಗಿಯೇ ಯಶ್ ಬರೋಬ್ಬರಿ 10 ಲಕ್ಷ ಖರ್ಚು ಮಾಡಿದ್ದಾರಂತೆ.

ಸೆಲೆಬ್ರಿಟಿಗಳು ತಮ್ಮ ಕಾರಿಗೆ ಮೆಚ್ಚಿನ ಸಂಖ್ಯೆಯೇ ಬೇಕು ಎಂದು ದುಡ್ಡು ಕೊಟ್ಟು ಮಾಡಿಸಿಕೊಳ್ಳುತ್ತಾರೆ .ಯಶ್ ಕೂಡಾ ತಮ್ಮ ರೇಂಜ್ ರೋವರ್ ಕಾರಿನ ನಂಬರ್ ನ್ನು ಬಾಸ್ ಎಂದು ಬರುವಂತೆ ಮಾಡಿಸಿಕೊಂಡಿದ್ದು ಇದಕ್ಕಾಗಿ ಅವರು ಬರೋಬ್ಬರಿ 10 ಲಕ್ಷ ರೂ. ಖರ್ಚು ಮಾಡಿದ್ದಾರಂತೆ.

10 ಲಕ್ಷ ರೂ. ಇದ್ದರೆ ನಾವೆಲ್ಲಾ ಒಂದು ಕಾರು ಖರೀದಿ ಮಾಡಬಹುದು. ಆದರೆ ಯಶ್ ಕೇವಲ ನಂಬರ್ ಪ್ಲೇಟ್ ಗಾಗಿಯೇ ಇಷ್ಟು ಖರ್ಚು ಮಾಡಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಯಶ್ ಸಂಭಾವನೆ, ಜೀವನ ಶೈಲಿಯೂ ಬದಲಾಗಿದೆ. ಅದಕ್ಕೆ ಈ ನಂಬರ್ ಪ್ಲೇಟ್ ವಿಚಾರವೇ ಉದಾಹರಣೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಡರ್ನ್ ಡ್ರೆಸ್ ಹಾಕಿದ್ದರೂ ತಾಳಿ ಬಿಡದ ಸೋನಲ್ ಮೊಂಥೆರೋ