Publish Date: Thu, 19 Mar 2020 (09:51 IST)
Updated Date: Thu, 19 Mar 2020 (09:53 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೊಂದು ಬಂದಿದೆ. ರಾಬರ್ಟ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗುವುದು ಪಕ್ಕಾ ಆಗಿದೆ.
ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರಮಂದಿರಗಳು ಬಂದ್ ಆಗಿದ್ದು, ಚಿತ್ರರಂಗದ ಕೆಲಸಗಳೂ ಸ್ಥಗಿತಗೊಂಡಿವೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡುವುದು ಅನಿವಾರ್ಯವಾಗಿದೆ.
ಏಪ್ರಿಲ್ ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಮಾಡಬೇಕೆಂದು ಈ ಮೊದಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಈಗ ಕೊರೋನಾದಿಂದಾಗಿ ರಾಬರ್ಟ್ ರಿಲೀಸ್ ಮುಂದೂಡಿಕೆಯಾಗಿದೆ.