Publish Date: Tue, 29 Nov 2022 (08:20 IST)
Updated Date: Tue, 29 Nov 2022 (08:40 IST)
ಬೆಂಗಳೂರು: ಕಾಂತಾರ ಸಕ್ಸಸ್ ಆದ ಬೆನ್ನಲ್ಲೇ ಎರಡನೇ ಭಾಗ ಮಾಡುತ್ತೀರಾ ಎಂಬ ಪ್ರಶ್ನೆ ನಿರ್ದೇಶಕ ರಿಷಬ್ ಶೆಟ್ಟಿಗೆ ಎದುರಾಗಿತ್ತು. ಇದಕ್ಕೆ ಶೆಟ್ರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಕಾಂತಾರ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದ್ದರಿಂದ ಹೊಂಬಾಳೆ ಫಿಲಂಸ್ ಎರಡನೇ ಭಾಗ ನಿರ್ಮಿಸಲು ಮುಂದಾಗಿದೆಯಂತೆ. ರಿಷಬ್ ಶೆಟ್ಟಿ ಈಗ ಎರಡನೇ ಭಾಗಕ್ಕೆ ಕತೆ ಬರೆಯುವ ಕೆಲಸ ಆರಂಭಿಸಿದ್ದಾರೆ ಎಂಬ ಸುದ್ದಿಯಿದೆ.
ಮೊದಲನೇ ಭಾಗದ ಅಂತ್ಯದಲ್ಲಿ ನಾಯಕ ಶಿವ ಏನಾದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಎರಡನೇ ಭಾಗದಲ್ಲಿ ಆ ಪ್ರಶ್ನೆಗೆ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಿದೆ.