Publish Date: Thu, 09 Apr 2020 (09:57 IST)
Updated Date: Thu, 09 Apr 2020 (09:58 IST)
ಬೆಂಗಳೂರು: ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳನ್ನು ಕ್ರಿಯೇಟಿವ್ ಆಗಿ ಮಾಡಿ ಜನರ ಮನ ಗೆಲ್ಲುತ್ತಾರೆ. ಆದರೆ ಈಗ ಲಾಕ್ ಡೌನ್ ವೇಳೆಯಲ್ಲೂ ಮಗನ ಮೊದಲ ಬರ್ತ್ ಡೇಯನ್ನು ವಿಶಿಷ್ಟವಾಗಿ ಆಚರಿಸಿ ಸುದ್ದಿಯಾಗಿದ್ದಾರೆ.
ರನ್ವಿತ್ ಶೆಟ್ಟಿ ಮೊನ್ನೆಯಷ್ಟೇ ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾನೆ. ಲಾಕ್ ಡೌನ್ ಎಂದು ಮಗನ ಬರ್ತ್ ಡೇಯನ್ನು ಆಚರಿಸಿಕೊಳ್ಳದೇ ಇರಲು ಸಾಧ‍್ಯವೇ?
ಸದ್ಯಕ್ಕೆ ತವರೂರಿನಲ್ಲಿ ಬೀಡುಬಿಟ್ಟಿರುವ ರಿಷಬ್ ಪಕ್ಕಾ ಕರಾವಳಿ ಶೈಲಿಯಲ್ಲಿ ಬರ್ತ್ ಡೇ ಸೆಟ್ ಹಾಕಿ ಸಂಭ್ರಮಾಚರಿಸಿದ್ದಾರೆ. ಸುತ್ತ ಹಲಸಿನ ಹಣ್ಣು, ಎಳೆ ನೀರಿನ ಗೊಂಚಲು, ತೆಂಗಿನ ಗರಿ ಇರಿಸಿ ಬರ್ತ್ ಡೇ ಸೆಟ್ಟಪ್ ಮಾಡಿದ್ದು, ಪತ್ನಿ, ಹಾಗೂ ಕುಟುಂಬ ಸದಸ್ಯರ ಜತೆಗೂಡಿ ಬರ್ತ್ ಡೇ ಆಚರಿಸಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದ್ದು, ಇನ್ನು ಮುಂದೆ ಬರ್ತ್ ಡೇ ಆಚರಿಸಿಕೊಳ‍್ಳುವವರಿಗೂ ಹೊಸ ಐಡಿಯಾ ಕೊಟ್ಟಿದೆ.