Publish Date: Sat, 26 Dec 2020 (09:37 IST)
Updated Date: Sat, 26 Dec 2020 (09:38 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ನಿನ್ನೆ ಬಿಡುಗಡೆಯಾಗಿ ಭರ್ಜರಿ ಲೈಕ್ಸ್ ಪಡೆದಿದೆ.
ಈ ಮೆಲೊಡಿ ಹಾಡಿನ ಕನ್ನಡ ಅವತರಣಿಕೆಯನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಕೇಳಿ ನಿರ್ದೇಶಕ ರಿಷಬ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ. ಪವರ್ ಸ್ಟಾರ್ ರೊಮ್ಯಾನ್ಸ್ ಬಗ್ಗೆ ಅವರು ಪವರ್ ಅನ್ನು ಪ್ರೇಮದಲ್ಲಿ ಅದ್ದಿ ತೆಗೆದಾಗ ಹುಟ್ಟಿರಬಹುದಾದ ಸುಂದರ ಗೀತೆ, ಕಿವಿ ತಂಪಾಯಿತು ಎಂದು ಹೊಗಳಿದ್ದಾರೆ. ತಮನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ನೀನಾದೆ ನಾ ಹಾಡಿಗೆ ಅರ್ಮಾನ್ ಮಲಿಕ್, ಶ್ರೇಯಾ ಘೋಷಾಲ್ ಧ‍್ವನಿ ನೀಡಿದ್ದಾರೆ.