ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಸೂಪರ್ ಹಿಟ್ ಆಗಿತ್ತು. ಗಡಿನಾಡ ಕನ್ನಡ ಶಾಲೆಯ ಸ್ಥಿತಿಗತಿ ಬಗ್ಗೆ ಈ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿತ್ತು.
ಆದರೆ ಆ ಸಿನಿಮಾ ಶೂಟಿಂಗ್ ಮಾಡಿದ ಕೈರಂಗಳ ಶಾಲೆಯ ಸ್ಥಿತಿ ಸಿನಿಮಾದ ಕತೆಯಲ್ಲಿದ್ದಕ್ಕಿಂತ ಭಿನ್ನಾಗೇನೂ ಇರಲಿಲ್ಲ. ದುಸ್ಥಿತಿಯಲ್ಲಿದ್ದ ಆ ಶಾಲೆಯ ದುರಸ್ತಿಗೆ ಇದೀಗ ರಿಷಬ್ ಶೆಟ್ಟಿ ಮತ್ತು ತಂಡ ಮುಂದಾಗಿದೆ.
ಶಾಲೆಯ ಸೂರು ರಿಪೇರಿ ಮಾಡಿದ್ದ ಪೇಂಟ್ ಮಾಡಿಸುವ ದುರಸ್ಥಿ ಕೆಲಸಕ್ಕೆ ರಿಷಬ್ ಶೆಟ್ಟಿ ನೇತೃತ್ವ ವಹಿಸಿದ್ದಾರೆ. ಸೌಲಭ್ಯಗಳಿಲ್ಲದೇ ಸಿನಿಮಾದಲ್ಲಿದ್ದ ಹಾಗೇ ಶೋಚನೀಯ ಸ್ಥಿತಿಯಲ್ಲಿದ್ದ ಶಾಲೆಯ ದುರಸ್ಥಿ ಕಾರ್ಯಕ್ಕೆ ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಮುಂದಾದೆವು ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಶೆಟ್ಟರ ಕಳಕಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ