Webdunia - Bharat's app for daily news and videos

Install App

ಅಭಿಮಾನಿಗೋಸ್ಕರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ರು ರಶ್ಮಿಕಾ ಮಂದಣ್ಣ

Webdunia
ಗುರುವಾರ, 19 ಜುಲೈ 2018 (09:14 IST)
ಬೆಂಗಳೂರು: ಸಿನಿಮಾ ತಾರೆಯರನ್ನು ಅಭಿಮಾನಿಗಳು ದೇವರಂತೇ ಪೂಜೆ ಮಾಡ್ತಾರೆ. ಆದರೆ ಅದೇ ತಾವು ಆರಾಧಿಸುವ ತಾರೆಯರು ತಮಗಾಗಿ ಕೆಲಸ ಮಾಡಿಕೊಟ್ಟರೆ ಅಭಿಮಾನಿಗಳು ಎಷ್ಟು ಖುಷಿಯಾಗುತ್ತಾರೆ ಗೊತ್ತಾ?

ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಬ್ಯುಸಿ ನಟಿ. ಹಾಗಿದ್ದರೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪಲ್ಲವಿ ಎಂಬ ಅಭಿಮಾನಿಗೆ ಹಣ ಸಹಾಯ ಮಾಡಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಉದಯ ಟಿವಿಯ ‘ಸದಾ ನಿಮ್ಮೊಂದಿಗೆ’ ರಿಯಾಲಿಟಿ ಶೋನಲ್ಲಿ ರಶ್ಮಿಕಾ ಇಂತಹ ಕೆಲಸ ಮಾಡಿದ್ದಾರೆ. ಪಲ್ಲವಿ ಎನ್ನುವ ಅಭಿಮಾನಿಯ ಚಿಕಿತ್ಸೆಗೆ ನೆರವಾಗಲು ರಶ್ಮಿಕಾ ರಾಜಾಜಿನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಒಂದು ದಿನ ಕೆಲಸ ಮಾಡಿ ಅಲ್ಲಿ ಪಡೆದ ವೇತನವನ್ನು ಪಲ್ಲವಿಗೆ ನೀಡಿದ್ದಾರೆ.

ರಶ್ಮಿಕಾ ಪೆಟ್ರೋಲ್ ಬಂಕ್ ನಲ್ಲಿ ಭಾರೀ ಉತ್ಸಾಹದಿಂದ ಪೆಟ್ರೋಲ್ ಹಾಕುತ್ತಿದ್ದರೆ ಅಭಿಮಾನಿಗಳು ಬಾರದೇ ಇರುತ್ತಾರಾ? ತಮ್ಮ ಗಾಡಿಗೆ ಪೆಟ್ರೋಲ್ ಹಾಕಿಸಿದಂತೂ ಆಯ್ತು, ರಶ್ಮಿಕಾರನ್ನು ನೋಡಿದ ಹಾಗೂ ಆಯ್ತು ಎಂದು ಅದೆಷ್ಟೋ ಮಂದಿ ಬಂದು ಹೋದರು. ಅಂತೂ ರಶ್ಮಿಕಾ ಕೊನೆಗೆ ಎಷ್ಟು ದುಡ್ಡು ಸಂಪಾದನೆ ಮಾಡಿದರು ಎನ್ನುವುದನ್ನು ನೋಡಬೇಕಾದರೆ ಉದಯ ಟಿವಿಯಲ್ಲಿ ಭಾನುವಾರ ರಾತ್ರಿ 9 ಕ್ಕೆ ಪ್ರಸಾರವಾಗಲಿರುವ ಈ ಶೋವರೆಗೂ ಕಾಯಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

Darshan: ಫೋನ್ ನಂಬರ್ ಕೊಡು ಎಂದು ದರ್ಶನ್ ಮುಂದೆ ಹಠ ಹಿಡಿದ ಪವಿತ್ರಾ ಗೌಡ: ದರ್ಶನ್ ಬೆನ್ನು ಬಿಡದ ಸ್ನೇಹಿತೆ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

ಮುಂದಿನ ಸುದ್ದಿ
Show comments