Publish Date: Sun, 26 Mar 2023 (08:50 IST)
Updated Date: Sun, 26 Mar 2023 (09:15 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಿನ್ನೆ ಆರಂಭವಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ನಟಿ ರಮ್ಯಾ ಪಾಲ್ಗೊಂಡಿದ್ದಾರೆ.
ರಮ್ಯಾ ಬಾಲ್ಯದಿಂದ ಹಿಡಿದು, ಅವರ ಸಿನಿಮಾ ಜೀವನ, ರಾಜಕೀಯ ಜೀವನ, ಫ್ರೆಂಡ್ಸ್ ಎಂದು ಅನೇಕ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ರಮ್ಯಾ ಶೋನಲ್ಲಿ ಹೆಚ್ಚು ಇಂಗ್ಲಿಷ್ ಪದವನ್ನೇ ಬಳಕೆ ಮಾಡಿ ಮಾತನಾಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಮ್ಯಾಗೆ ಕನ್ನಡ ಬರಲ್ವಾ? ಅವರು ಮಾತನಾಡೋದನ್ನು ಅರ್ಥ ಮಾಡಲು ನಮಗೆ ಒಬ್ಬರು ಟ್ರಾನ್ಸ್ ಲೇಟರ್ ಬೇಕಾಗಬಹುದು ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಕನ್ನಡ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕೆಂದು ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಸೂಚಿಸಬೇಕು ಎಂದೂ ಸಲಹೆ ಕೊಟ್ಟಿದ್ದಾರೆ.