ಬೆಂಗಳೂರು: ನಟಿ ರಮ್ಯಾ ರಾಜಕೀಯದಲ್ಲಿ ಸಕ್ರಿಯರಾದ ಮೇಲೆ ಸಿನಿಮಾವನ್ನು ಮರೆತೇಬಿಟ್ಟರೇನೋ ಎಂಬಷ್ಟು ಬ್ಯುಸಿಯಾಗಿಬಿಟ್ಟರು. ಆದರೆ ಇದೀಗ ಅಪರೂಪಕ್ಕೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಆದರೆ ಬಣ್ಣ ಹಚ್ಚಲ್ಲ ಎಂದು ಶಪಥ ಮಾಡಿರುವ ರಮ್ಯಾ ಇದೀಗ ರಕ್ಷಿತ್ ಶೆಟ್ಟಿ ಸಿನಿಮಾದ ಟ್ರೇಲರ್ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ರಕ್ಷಿತ್ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದನ್ನು ಮೆಚ್ಚಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ನಿಮ್ಮ ಎಲ್ಲಾ ಸಿನಿಮಾಗಳ ಬಗ್ಗೆ ನಾನು ಓದುತ್ತಿರುತ್ತೇನೆ ರಕ್ಷಿತ್ ಶೆಟ್ಟಿ. ಕನ್ನಡ ಸಿನಿಮಾ ಮಿಸ್ ಮಾಡುತ್ತಿದ್ದನ್ನು ತುಂಬಲೆಂದೇ ನೀವು ಬಂದಿದ್ದಿರಿ ಎಂದು ನನಗೆ ಗೊತ್ತು. ನೀವು ಈವತ್ತು ಏನಾಗಿದ್ದೀರೋ ಅದರ ಬಗ್ಗೆ ನನಗೆ ಹೆಮ್ಮೆಯಿದೆ. ಈ ಸಿನಿಮಾಗೆ ಗುಡ್ ಲಕ್’ ಎಂದು ರಮ್ಯಾ ಟ್ವೀಟ್ ಮಾಡಿ ರಮ್ಯಾಗೆ ಶುಭ ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.