ಬೆಂಗಳೂರು: ನಿರ್ಮಾಪಕ ರಾಮು ಅಂತ್ಯಸಂಸ್ಕಾರದ ವಿಚಾರದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಸ್ವರವೆತ್ತಿದ್ದಾರೆ.
ಕೊರೋನಾದಿಂದಾಗಿ ಮೃತರಾದ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅಂತ್ಯಸಂಸ್ಕಾರವನ್ನು ನಿನ್ನೆ ಅವರ ತವರೂರು ಕೊಡಿಗೇನಹಳ್ಳಿಯಲ್ಲಿ ನೆರವೇರಿಸಲಾಯಿತು. ಈ ವೇಳೆ ಎಲ್ಲಾ ಕೊರೋನಾ ನಿಯಮಗಳನ್ನು ಅನುಸರಿಸಲಾಯಿತು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದವರು ಪಿಪಿಇ ಕಿಟ್ ಧರಿಸಿದ್ದರು.
ಆದರೆ ನೆಟ್ಟಿಗರಲ್ಲಿ ಕೆಲವರು ಸಾಮಾನ್ಯ ಜನರು ಕೊರೋನಾದಿಂದ ಸತ್ತರೆ ಮೃತದೇಹವನ್ನು ಕುಟುಂಬಸ್ಥರಿಗೆ ನೋಡಲೂ ಅವಕಾಶ ಕೊಡಲ್ಲ. ಸರ್ಕಾರವೇ ಐದು ಜನರಿಗಿಂತ ಜಾಸ್ತಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನಿಯಮ ಮಾಡಿದೆ. ಹಾಗಿದ್ದರೆ ಇದೆಲ್ಲಾ ರಾಮು ಅಂತ್ಯ ಸಂಸ್ಕಾರದಲ್ಲಿ ಹೇಗೆ ಸಾಧ‍್ಯವಾಯಿತು? ದುಡ್ಡಿದ್ದವರಿಗೆ ಒಂದು ನ್ಯಾಯ, ಬಡವರಿಗೆ ಇನ್ನೊಂದು ನ್ಯಾಯನಾ? ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.