Publish Date: Mon, 31 Jul 2023 (09:12 IST)
Updated Date: Mon, 31 Jul 2023 (09:14 IST)
ಬೆಂಗಳೂರು: ರಾಮಚಾರಿ ಧಾರವಾಹಿಯಲ್ಲಿ ರಾಮಚಾರಿ ಪಾತ್ರದ ಮೂಲಕ ಮನೆ ಮಾತಾಗಿರುವ ನಟ ರಿತ್ವಿಕ್ ಕೃಪಾಕರ್ ತಮ್ಮ ಅನಾರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ರಿತ್ವಿಕ್ ಕೃಪಾಕರ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ತಮಗೆ ಡೆಂಗ್ಯೂ ಜ್ವರ ತಗುಲಿರುವುದಾಗಿ ಮಾಹಿತಿ ನೀಡಿದ್ದಾರೆ. ಪ್ಲ್ಯಾಟ್ ಲೆಟ್ ಕೌಂಟ್ ಸಹಜವಾಗುತ್ತಿದೆ. ವೈದ್ಯರ ಸೂಚನೆ ಮೇರೆಗೆ ವಿಶ್ರಾಂತಿ ಪಡುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಮತ್ತೆ ಉತ್ಸಾಹದಿಂದ ನಿಮ್ಮ ಮುಂದೆ ಬರುತ್ತೇನೆ ಎಂದಿದ್ದಾರೆ ರಿತ್ವಿಕ್.
ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಡೆಂಗ್ಯೂ, ಮಲೇರಿಯಾ, ಕೆಂಪು ಕಣ್ಣು ಇತ್ಯಾದಿ ಸೋಂಕು ರೋಗಗಳು ಹೆಚ್ಚಾಗಿವೆ. ಇದರ ಬಗ್ಗೆ ಎಚ್ಚರವಹಿಸುವುದು ಸೂಕ್ತ.