Publish Date: Mon, 28 Jun 2021 (11:38 IST)
Updated Date: Mon, 28 Jun 2021 (09:43 IST)
ಬೆಂಗಳೂರು: ಲಾಕ್ ಡೌನ್ ವೇಳೆ ಮಕ್ಕಳು ಶಾಲೆಯೂ ಇಲ್ಲದೇ ಮನೆಯಲ್ಲಿ ಕೂತಿರುವಾಗ ಅನೇಕ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ತಮ್ಮ ಮಗನ ಕೆಲಸದ ಬಗ್ಗೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ವಿಡಿಯೋ ಸಮೇತ ಹೇಳಿಕೊಂಡಿದ್ದಾರೆ.
ರಕ್ಷಿತಾ-ಪ್ರೇಮ್ ದಂಪತಿ ಪುತ್ರ ಸೂರ್ಯ ತಮ್ಮ ತೋಟದಲ್ಲಿ ಬೆಳೆ ಕಟಾವು ಮಾಡುವ ದೃಶ್ಯವನ್ನು ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಈ ವಯಸ್ಸಿನಲ್ಲಿ ಅವನು ಕೃಷಿಯಲ್ಲಿ ಆಸಕ್ತಿ ಹೊಂದಿರುವುದು ಮತ್ತು ಸುಲಲಿತವಾಗಿ ಕಟಾವು ಮಾಡುವುದು ನೋಡಿ ಅವನ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.