ಬೆಂಗಳೂರು: ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ತಮ್ಮ ಹೊಸ ಮನೆಯ ಗೃಹಪ್ರವೇಶದ ಸಂಭ್ರಮದ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಿತಾ ಪ್ರೇಮ್ ಶಾಸ್ತ್ರೋಸ್ತ್ರಕವಾಗಿ ಹೊಸ ಮನೆಯ ಪೂಜೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ವೇಳೆ ರಕ್ಷಿತಾ ಕುಟುಂಬಸ್ಥರು ಹಾಜರಿದ್ದರು.
ರಕ್ಷಿತಾ, ಪತಿ ಪ್ರೇಮ್, ರಕ್ಷಿತಾ ತಾಯಿ, ಪುತ್ರ ಸೂರ್ಯ, ಸಹೋದರ, ನಟ ರಾಣಾ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಮನೆ ಹೊಸ ಗೃಹಪ್ರವೇಶ ಎಂದು ರಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.