Publish Date: Wed, 27 Nov 2019 (08:56 IST)
Updated Date: Wed, 27 Nov 2019 (08:57 IST)
ಬೆಂಗಳೂರು: ಬಹಳ ಸಮಯದ ನಂತರ ರಕ್ಷಿತ್ ಶೆಟ್ಟಿ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಅದೂ ‘ಅವನೇ ಶ್ರೀಮನ್ನಾರಾಯಣ’ ಎಂಬ ಬಹುನಿರೀಕ್ಷಿತ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಸದಾ ರಕ್ಷಿತ್ ಜತೆಗೇ ಇರುವ ರಿಷಬ್ ಶೆಟ್ಟಿ ಈಗ ಗೆಳೆಯನ ಸಿನಿಮಾಗೆ ಪಕ್ಕಾ ದೋಸ್ತ್ ಶೈಲಿಯಲ್ಲಿ ವಿಶ್ ಮಾಡಿದ್ದಾರೆ. ನವಂಬರ್ 28 ಕ್ಕೆ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಬಿಡುಗಡೆಯಾಗುತ್ತಿದೆ. ಇದಕ್ಕೆ ರಕ್ಷಿತ್ ತಮ್ಮದೇ ಶೈಲಿಯಲ್ಲಿ ಗೆಳೆಯನಿಗೆ ವಿಶ್ ಮಾಡಿದ್ದಾರೆ.
‘ಜೊತೆಯಲ್ಲಿದ್ದವರು, ಜೊತೆಯಲ್ಲೇ ಬೆಳೆದವ್ರಿಗೆ ಸಕ್ಸಸ್ ಸಿಕ್ಕಿದಾಗ ಅವ್ರಿಗಿಂತ ಜಾಸ್ತಿ ನಮಗೆ ಖುಷಿಯಾಗುತ್ತೆ. ಅಂತದ್ರಲ್ಲಿ ಅವರ ಸಿನಿಮಾ ಐದು ಸಿನಿಮಾಗಳಲ್ಲಿ ರಿಲೀಸ್ ಆಗುವಾಗ ಖುಷಿ ಐನೂರು ಪಟ್ಟು ಹೆಚ್ಚಾಗುತ್ತದೆ. ಮಗ ನಿನ್ನ ಸಕ್ಸಸ್ ಸೆಲೆಬ್ರೇಟ್ ಮಾಡಕ್ಕೆ ಕಾಯ್ತಿದ್ದೀನಿ’ ಎಂದು ರಕ್ಷಿತ್ ತಮ್ಮದೇ ಶೈಲಿಯಲ್ಲಿ ವಿಶ್ ಮಾಡಿದ್ದಾರೆ.