Publish Date: Sat, 11 Jun 2022 (09:00 IST)
Updated Date: Sat, 11 Jun 2022 (09:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಕ್ರಿಯೇಟಿವ್ ನಿರ್ದೇಶಕ, ನಿರ್ಮಾಪಕ, ನಟ ರಕ್ಷಿತ್ ಶೆಟ್ಟಿ ಈಗ ಚಾರ್ಲಿ 777 ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.
ರಕ್ಷಿತ್ ಈ ಹಿಂದೆ ಕಿಚ್ಚ ಸುದೀಪ್ ಗಾಗಿ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಸುದೀಪ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಎಲ್ಲಾ ಸರಿ ಹೋಗಿದ್ದರೆ ಈಗಾಗಲೇ ಇಬ್ಬರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಲೇ ಇಲ್ಲ.
ಈಗ ರಕ್ಷಿತ್ ತಮ್ಮ ಮೆಚ್ಚಿನ ನಟ ಸುದೀಪ್ ಗಾಗಿ ಸ್ಕ್ರಿಪ್ಟ್ ಒಂದನ್ನು ರೆಡಿ ಮಾಡಿದ್ದಾರಂತೆ. ಹೀಗಾಗಿ ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರುವುದಂತೂ ಗ್ಯಾರಂಟಿ. ಆದರೆ ಸದ್ಯಕ್ಕೆ ರಕ್ಷಿತ್ ಸಪ್ತಸಾಗರದಾಚೆ ಎಲ್ಲೊ, ಉಳಿದವರು ಕಂಡಂತೆ ಪಾರ್ಟ್ 2, ಕಿರಿಕ್ ಪಾರ್ಟಿ ಪಾರ್ಟ್ 2 ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಬಹುಶಃ ಸುದೀಪ್ ಜೊತೆಗೆ ಸಿನಿಮಾ ಮಾಡುವ ಸಾಧ‍್ಯತೆಯಿದೆ.