Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಊರಿಗೆ ಬಂದರೆ ತಾವು ಪಕ್ಕಾ ಹಳ್ಳಿ ಹೈದ ಎಂದು ನಿರೂಪಿಸುತ್ತಾರೆ. ಈಗ ರಕ್ಷಿತ್ ತಮ್ಮೂರಿನ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ ಮೂಲದವರಾದ ರಕ್ಷಿತ್ ತಮ್ಮೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಪಂಚೆ ಉಟ್ಟು, ತಲೆಗೆ ಮುಟ್ಟಾಲೆ ಹಾಕಿಕೊಂಡು ಗದ್ದೆಯಲ್ಲಿ ನೇಜಿ ನೆಟ್ಟಿದ್ದಾರೆ.
ಈ ವೇಳೆ ಅವರು ತಮ್ಮ ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಕೃಷಿ ನಾಟಿ ಮಾಡುತ್ತಿದ್ದ ಕಾಲ ನೆನೆಸಿಕೊಂಡರು. ಇನ್ನು, ರಕ್ಷಿತ್ ನೋಡಲು ಸ್ಥಳೀಯರ ದಂಡೇ ಅಲ್ಲಿ ನೆರೆದಿತ್ತು.