ಬೆಂಗಳೂರು : ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಇದೀಗ ಕನ್ನಡದಲ್ಲಿ ಒಪ್ಪಿಕೊಂಡ ವೃತ್ರ ಸಿನಿಮಾದಿಂದ ಹೊರನಡೆದಿದ್ದರಂತೆ.
ಹೌದು , ಸದ್ಯ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಈ ಚಿತ್ರವನ್ನ ಮುಗಿಸಿದ ಬಳಿಕ ಗೌತಮ್ ಅಯ್ಯರ್ ನಿರ್ದೇಶನದ ವೃತ್ರ ಚಿತ್ರದಲ್ಲಿ ಆಕ್ಟ್ ಮಾಡಬೇಕಿತ್ತು .ಈ ಚಿತ್ರದಲ್ಲಿ ರಶ್ಮಿಕಾ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ತೆಲುಗಿನಲ್ಲಿ ಕೆಲವೊಂದು ಸಿನಿಮಾಗಳನ್ನ ಒಪ್ಪಿಕೊಂಡಿದ್ದು ಡೇಟ್ಸ್ ನೀಡಲು ಸಾಧ್ಯವಾಗದೆ ಇರುವುದರಿಂದ , ಒಪ್ಪಿಕೊಂಡಿರುವ ಈ ಸಿನಿಮಾದಿಂದ ಹೊರ ನಡೆದಿದ್ದಾರಂತೆ.
ಆದರೆ ರಶ್ಮಿಕಾ ಈ ಚಿತ್ರದಿಂದ ಹೊರನಡೆಯಲು ನಟ ರಕ್ಷಿತ್ ಕಾರಣ ಎನ್ನಲಾಗಿದೆ. ಯಾಕಂದ್ರೆ ಈ ಚಿತ್ರದ ನಿರ್ದೇಶಕ ಗೌತಮ್ ಅಯ್ಯರ್ ರಕ್ಷಿತ್ ಕ್ಯಾಂಪ್ ನ ಹುಡುಗ . ವೈಯಕ್ತಿಕ ಜೀವನದಲ್ಲೂ ರಕ್ಷಿತ್ ರಿಂದ ದೂರವಾದ ರಶ್ಮಿಕಾ ಸದ್ಯ ಈ ನಟನ ಕ್ಯಾಂಪ್ ನಿಂದಲು ಹೊರ ಬರುತ್ತಿದ್ದಾರೆ . ಹೀಗಾಗೆ ವೃತ್ರ ಚಿತ್ರವನ್ನ ಕೈ ಬಿಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.