ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನ ಪ್ರತೀ ಸೀಸನ್ ನಲ್ಲೂ ಒಂದೊಂದು ಜೋಡಿಗಳಿತ್ತು. ಈ ಬಾರಿಯೂ ಹೊಸ ಜೋಡಿಯೊಂದು ಸೃಷ್ಟಿಯಾಗುವ ಸೂಚನೆಯಿದೆ.
ಇತ್ತೀಚೆಗೆ ಒಟಿಟಿ ಸ್ಪರ್ಧಿಯಾಗಿದ್ದ ರಾಕೇಶ್ ಅಡಿಗ ಮತ್ತು ನವೀನರಾಗಿ ಮನೆಗೆ ಎಂಟ್ರಿಕೊಟ್ಟಿದ್ದ ಅಮೂಲ್ಯ ಗೌಡ ನಡುವೆ ಉತ್ತಮ ಬಾಂಧವ್ಯವೇರ್ಪಡುತ್ತಿದೆ.
ಇದನ್ನು ಗಮನಿಸಿರುವ ನೆಟ್ಟಿಗರು ರಾಕೇಶ್ ಯಾಕೋ ಅಮೂಲ್ಯಗೆ ಬೀಳ್ತಿದ್ದಾರೆ ಎಂದು ಕಿಚಾಯಿಸುತ್ತಿದ್ದಾರೆ. ಇಬ್ಬರ ನಡುವೆ ಕೆಮೆಸ್ಟ್ರಿ ವರ್ಕ್ ಆಗುತ್ತಿದ್ದು, ಈ ಜೋಡಿ ನಡುವಿನ ಬಾಂಧವ್ಯ ಗಟ್ಟಿಯಾಗುವ ಲಕ್ಷಣ ಕಾಣುತ್ತಿದೆ.
-Edited by Rajesh Patil