ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡಿನಲ್ಲಿ ಗರಿಷ್ಠ ತೆರಿಗೆ ಕಟ್ಟಿದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದು, ಅವರನ್ನು ಆದಾಯ ತೆರಿಗೆ ಇಲಾಖೆ ಸನ್ಮಾನಿಸಿದೆ.
ತಮಿಳುನಾಡಿನಲ್ಲಿ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿರುವ ರಜನಿ ತೆರಿಗೆ ಕಟ್ಟುವ ವಿಚಾರದಲ್ಲೂ ಮುಂದಿದ್ದಾರೆ. ತೆರಿಗೆ ಕಟ್ಟುವ ವಿಚಾರದಲ್ಲಿ ರಜನಿ ಪ್ರಾಮಾಣಿಕವಾಗಿದ್ದಾರೆ. ಅವರ ಈ ಪ್ರಾಮಾಣಿಕತೆ ಮೆಚ್ಚಿ ಆದಾಯ ತೆರಿಗೆ ಇಲಾಖೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದೆ.
ತಂದೆಯ ಪರವಾಗಿ ರಜನಿ ಪುತ್ರಿ ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ಪ್ರಾಮಾಣಿಕತೆಗೆ ಈ ಗೌರವ ಸಂದಿದೆ.