ಬೆಂಗಳೂರು: ಮಾದಕ ದ್ರವ್ಯ ಮಾಫಿಯಾ ಆರೋಪ ವಿಚಾರದಲ್ಲಿ ನಟಿ ರಾಗೊಣೊ ದ್ವಿವೇದಿ ವಿರುದ್ಧ ಆರೋಪಿ ನಂ.2 ಎಂದು ಪ್ರಕರಣ ದಾಖಲಾಗಿದೆ.
ರಾಗಿಣಿ ಬಾಯ್ ಫ್ರೆಂಡ್ ಶಿವಕುಮಾರ್ ಆರೋಪಿ ನಂ.1, ಡ್ರಗ್ ಪೂರೈಕೆ ಮಾಡುತ್ತಿದ್ದ ವೀರೇನ್ ನಂ.3 ಆರೋಪಿಯಾಗಿದ್ದಾನೆ. ಇದೀಗ ಡ್ರಗ್ ಪೆಡ್ಲರ್ ರಾಹುಲ್ ನನ್ನೂ ತೀವ್ರ ವಿಚಾರಣೆಗೊಳಪಡಿಸುತ್ತಿರುವ ಪೊಲೀಸರು ಆತನ ಸಂಪರ್ಕದಲ್ಲಿದ್ದವರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೀಗಾಗಿ ಇನ್ನಷ್ಟು ಸೆಲೆಬ್ರಿಟಿಗಳು ಬಲೆಗೆ ಬೀಳುವ ಸಾಧ್ಯತೆಯಿದೆ.