ಬೆಂಗಳೂರು: ಸ್ಯಾಂಡಲ್ ವುಡ್ ಪ್ರಿನ್ಸ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಗೆ ಮಗಳು ಹುಟ್ಟಿ ಆಗಲೇ 5 ತಿಂಗಳು ಕಳೆದುಹೋಗಿದೆ. ಆದರೆ ಇದುವರೆಗೆ ಈ ರಾಕಿಂಗ್ ಜೋಡಿಯ ಮುದ್ದು ಮಗುವಿನ ಮುಖ ಬಹಿರಂಗಪಡಿಸಿರಲಿಲ್ಲ.
ಅಭಿಮಾನಿಗಳು ಇವರ ಮಗುವಿನ ಫೋಟೋ ಪ್ರಕಟಿಸುವಂತೆ ರಾಧಿಕಾ ಮತ್ತು ಯಶ್ ಗೆ ಒತ್ತಾಯಿಸುತ್ತಲೇ ಇರುತ್ತಾರೆ. ಆದರೆ ಇದುವರೆಗೆ ಇವರು ಫೋಟೋ ಬಹಿರಂಗಗೊಳಿಸಿರಲಿಲ್ಲ.
ಇದೀಗ ರಾಧಿಕಾ ಪಂಡಿತ್ ತಮ್ಮ ಮಗಳು ಅಪ್ಪ ಯಶ್ ಜತೆ ಆಡುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ಆದರೆ ಇದರಲ್ಲಿ ಮಗಳ ಮುಖ ಕಾಣುತ್ತಿಲ್ಲ. ಆದರೆ ನಿರಾಶರಾಗಬೇಕಿಲ್ಲ. ಮೇ 7 ರಂದು ಅಂದರೆ ಅಕ್ಷಯ ತೃತೀಯ ದಿನ ತಮ್ಮ ಮನೆಯ ಅಮೂಲ್ಯ ಬಂಗಾರವನ್ನು ನಿಮಗೆ ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮೇ 7 ರಂದು ರಾಧಿಕಾ ಪಂಡಿತ್ ಪ್ರಕಟಿಸುವ ರಾಕಿಂಗ್ ಮಗಳ ಫೋಟೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ