ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಮ್ಮ ಇಬ್ಬರು ಪುಟಾಣಿ ಮಕ್ಕಳ ಜೊತೆಗೆ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.
ಐರಾ ಯಶ್ ಮತ್ತು ಯಥರ್ವ್ ಯಶ್ ಜೊತೆಯಾಗಿ ಆಡುವ ಫೋಟೋಗಳನ್ನು ಪ್ರಕಟಿಸಿದ ರಾಧಿಕಾ ಈ ಪುಟಾಣಿಗಳ ಹಾಗೆ ನಿಮ್ಮ ಜೀವನದಲ್ಲೂ ಪ್ರೀತಿ, ಖುಷಿ, ಕೊಂಚ ತುಂಟಾಟ ತುಂಬಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.