ಬೆಂಗಳೂರು: ಕೊರೋನಾ ನಡುವೆಯೂ ಗೌರಿ-ಗಣೇಶ ಹಬ್ಬವನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ಹಬ್ಬ ಜೋರಾಗಿಯೇ ನಡೆಯುತ್ತಿದೆ.
ಅಂದ ಹಾಗೆ ರಾಕಿ ಬಾಯ್ ಮನೆಯಲ್ಲಿ ಏನು ಸ್ಪೆಷಲ್ ಗೊತ್ತಾ? ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋವನ್ನು ಪ್ರಕಟಿಸಿದ್ದು, ತಮ್ಮ ಮನೆಯಲ್ಲಿ ಏನು ಸ್ಪೆಷಲ್ ಮಾಡಿದ್ದೇವೆ ಎಂಬುದನ್ನು ತಿಳಿಸಿದ್ದಾರೆ.
ಹಬ್ಬಕ್ಕೆ ಬೆಲ್ಲ, ಕಾಯಿ ಹಾಕಿ ಅರಸಿನ ಎಲೆಯಲ್ಲಿ ಮಡಚಿದ ಕೊಂಕಣಿ ಶೈಲಿಯ ‘ಪತ್ತೋಳಿ’ ಸಿಹಿ ತಿನಿಸು ಮಾಡಿರುವುದಾಗಿ ರಾಧಿಕಾ ಹೇಳಿಕೊಂಡಿದ್ದಾರೆ. ರೆಸಿಪಿಯನ್ನೂ ಹಂಚಿಕೊಂಡಿದ್ದಾರೆ.