Publish Date: Fri, 31 Mar 2017 (09:55 IST)
Updated Date: Fri, 31 Mar 2017 (09:58 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಧಿಕಾ ಮತ್ತು ಬಹುಭಾಷಾ ನಟ ಅರ್ಜುನ್ ಸರ್ಜಾ ಒಪ್ಪಂದ ಮಾಡಿಕೊಂಡಿದ್ದಾರಂತೆ! ಯಾವ ಒಪ್ಪಂದ? ಏನು ಒಪ್ಪಂದ? ಎಂಬ ಪ್ರಶ್ನೆಯೇ? ಈ ಸುದ್ದಿ ಓದಿ.
ಒಪ್ಪಂದ ಎಂದಿದ್ದು, ಇವರಿಬ್ಬರ ಹೊಸ ಸಿನಿಮಾ ‘ಕಾಂಟ್ರಾಕ್ಟ್’ ಬಗ್ಗೆ. ರುದ್ರ ತಾಂಡವ ಚಿತ್ರದ ನಂತರ ರಾಧಿಕಾ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಅರ್ಜುನ್ ಸರ್ಜಾ ನಾಯಕರಾಗಿರುವ ಕಾಂಟ್ರಾಕ್ಟ್ ಸಿನಿಮಾ ಮೂಲಕ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ಈ ಚಿತ್ರ ನಾಲ್ಕು ವರ್ಷಗಳ ಹಿಂದೆಯೇ ತೆರೆ ಕಾಣಬೇಕಿತ್ತು. ಆದರೆ ಮುಹೂರ್ತ ನಡೆಸಿ ಸುಮ್ಮನಿದ್ದ ಚಿತ್ರತಂಡ, ಈಗ ಹೊಸತನದೊಂದಿಗೆ ಚಿತ್ರೀಕರಣ ಆರಂಭಿಸಿದೆ. ಸಮೀರ್ ಈ ಚಿತ್ರವನ್ನು ಬರೆದು, ನಿರ್ದೇಶಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ