Publish Date: Wed, 08 Sep 2021 (10:36 IST)
Updated Date: Wed, 08 Sep 2021 (10:38 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಂ ಈಗ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಆ ವಿಶೇಷ ವ್ಯಕ್ತಿಯನ್ನು ಒಂದೂವರೆ ವರ್ಷಗಳ ಬಳಿಕ ಭೇಟಿಯಾಗಿರುವುದು. ಅಷ್ಟಕ್ಕೂ ಆ ವಿಶೇಷ ವ್ಯಕ್ತಿ ಯಾರು ಗೊತ್ತಾ?
ರಚಿತಾ ರಾಂ ಸಹೋದರಿ ನಿತ್ಯಾ ರಾಂ. ನಿತ್ಯಾ ಕಳೆದ ವರ್ಷ ಮದುವೆಯಾಗಿ ಆಸ್ಟ್ರೇಲಿಯಾಗೆ ತೆರಳಿದ್ದರು. ಅದಾದ ಬಳಿಕ ಕೊರೋನಾದಿಂದಾಗಿ ನಿತ್ಯಾ ತವರಿಗೆ ಬಂದಿರಲಿಲ್ಲ.
ಈಗ ಬರೋಬ್ಬರಿ ಒಂದೂವರೆ ವರ್ಷ ಬಳಿಕ ನಿತ್ಯಾ ಹಬ್ಬಕ್ಕೆಂದು ತವರಿಗೆ ಬಂದಿದ್ದು, ಆಕೆಯ ಜೊತೆ ಇರುವ ವಿಡಿಯೋ ಪ್ರಕಟಿಸಿರುವ ರಚಿತಾ, ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಮತ್ತೆ ನಾವಿಬ್ಬರೂ ಒಂದಾಗಿದ್ದೇವೆ. ಎಷ್ಟು ಥ್ರಿಲ್ ಆಗಿದ್ದೇನೆಂದು ಹೇಳಲೂ ಆಗುತ್ತಿಲ್ಲ ಎಂದು ರಚಿತಾ ಖುಷಿಯಿಂದ ಹೇಳಿಕೊಂಡಿದ್ದಾರೆ.