Publish Date: Wed, 19 Jan 2022 (10:58 IST)
Updated Date: Wed, 19 Jan 2022 (10:58 IST)
ಬೆಂಗಳೂರು: ನಟಿ ರಚಿತಾ ರಾಂ ಈ ಹಿಂದೆ ಮುಖ ಮುಚ್ಚಿಕೊಂಡು ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸುತ್ತಾಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಮತ್ತೆ ಅವರು ಸ್ನೇಹಿತ, ಆರ್ ಜೆ ಮಯೂರ್ ಜೊತೆ ಬೆಂಗಳೂರು ರೌಂಡ್ಸ್ ಹಾಕಿ ಸುದ್ದಿಯಾಗಿದ್ದಾರೆ.
ಮುಖ ಮುಚ್ಚಿಕೊಂಡು ಮೊದಲು ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ರಚಿತಾ ಬಳಿಕ ವಿದ್ಯಾರ್ಥಿ ಭವನಕ್ಕೆ ತೆರಳಿ ಮಸಾಲೆ ದೋಸೆ ಸವಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖ ಮುಚ್ಚಿಕೊಂಡು ಓಡಾಡಿದ್ದರಿಂದ ಯಾರೂ ರಚಿತಾ ಗುರುತು ಹಿಡಿದಿರಲಿಲ್ಲ. ಆದರೆ ವಿದ್ಯಾರ್ಥಿ ಭವನದಲ್ಲಿ ಮಾತ್ರ ದೋಸೆ ಸವಿದ ಬಳಿಕ ಮೆಚ್ಚುಗೆಯ ನೋಟ್ ಬರೆದು ಅಲ್ಲಿನ ಸಿಬ್ಬಂದಿಗಳೊಂದಿಗೆ ಫೋಟೋಗೂ ಪೋಸ್ ಕೊಟ್ಟಿದ್ದಾರೆ.
Krishnaveni K
Publish Date: Wed, 19 Jan 2022 (10:58 IST)
Updated Date: Wed, 19 Jan 2022 (10:58 IST)