Publish Date: Fri, 07 Jan 2022 (09:30 IST)
Updated Date: Fri, 07 Jan 2022 (09:38 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿದ್ದ ಜೇಮ್ಸ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.
ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಈಗಷ್ಟೇ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ಇನ್ನೇನು ಮುಕ್ತಾಯಗೊಳ್ಳಲಿದ್ದು, ಅದಾದ ಬಳಿಕ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದೆ.
ಈ ಸಿನಿಮಾ ಪುನೀತ್ ಹುಟ್ಟುಹಬ್ಬದಂದು ಅಂದರೆ ಮಾರ್ಚ್ 17 ಕ್ಕೆ ಬಿಡುಗಡೆಯಾಗಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಸದ್ಯಕ್ಕೆ ಕೊರೋನಾ ಕಾಟವಿದ್ದು, ಥಿಯೇಟರ್ ಮೇಲೆ ನಿರ್ಬಂಧವಿದೆ. ಹೀಗಾಗಿ ಮಾರ್ಚ್ 17 ಕ್ಕೆ ರಿಲೀಸ್ ದಿನಾಂಕ ಪ್ರಕಟಿಸುವುದು ಅನುಮಾನ ಎನ್ನಲಾಗಿದೆ. ಕೊರೋನಾ ಸಂಕಷ್ಟ ಮುಗಿದ ಮೇಲೆಯೇ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.