Publish Date: Sun, 23 Jan 2022 (09:19 IST)
Updated Date: Sun, 23 Jan 2022 (09:21 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾದ ಶೂಟಿಂಗ್ ಇದೀಗ ಮುಕ್ತಾಯವಾಗಿದೆ.
ಚೇತನ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿತ್ತು. ಈಗ ಚಿತ್ರತಂಡ ಉಳಿದವರ ಚಿತ್ರೀಕರಣವನ್ನೂ ಮುಗಿಸಿಕೊಂಡು ಚಿತ್ರೀಕರಣ ಪೂರ್ತಿಮಾಡಿದೆ.
ಚಿತ್ರೀಕರಣದ ಕೊನೆಯ ದಿನ ಪುನೀತ್ ಫೋಟೋಗಳ ಕಟೌಟ್ ಹಾಕಿಸಿ ದೀಪ ಹಚ್ಚಿ ಅವರಿಗೆ ನಮನ ಸಲ್ಲಿಸಿದೆ. ಬಳಿಕ ಇಡೀ ಚಿತ್ರತಂಡ ಅವರ ಫೋಟೋ ಮುಂದೆ ಕುಳಿತು ಫೋಟೋ ತೆಗೆಸಿಕೊಳ್ಳುವುದರ ಮೂಲಕ ಚಿತ್ರೀಕರಣಕ್ಕೆ ಮಂಗಳ ಹಾಡಿದೆ. ಈ ಸಿನಿಮಾ ಇದೇ ಮಾರ್ಚ್ 17 ರಂದು ಪುನೀತ್ ಬರ್ತ್ ಡೇಗೆ ರಿಲೀಸ್ ಆಗುವ ನಿರೀಕ್ಷೆಯಿದೆ.