ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರ ಮುದ್ದಿನ ಮಡದಿ ಅಶ್ವಿನಿ ಪುನೀತ್ ರಾಜಕುಮಾರ್ ಗೆ ಇಂದು ಸ್ಪೆಷಲ್ ಡೇ. ಯಾಕೆ ಅಂತೀರಾ?
ಪುನೀತ್ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ. 1999 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುನೀತ್-ಅಶ್ವಿನಿ ಜೋಡಿ ಇಂದಿಗೆ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದೂ ಮದುವೆಯಾದ ಬಳಿಕವೇ. ಇನ್ನು, ಪುನೀತ್ ದಂಪತಿಗೆ ರಾಘವೇಂದ್ರ ರಾಜಕುಮಾರ್, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.