ಬೆಂಗಳೂರು: ಕೊರಿಯನ್ ಮೂಲದ ಯುವತಿಯೊಬ್ಬಳು ಯುವರತ್ನ ಸಿನಿಮಾದ ನೀನಾದೆ ನಾ ಹಾಡಿಗೆ ಧ್ವನಿಯಾಗಿದ್ದ ವಿಡಿಯೋವೊಂದು ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕನ್ನಡದ ಹಾಡಿಗೆ ಕೊರಿಯನ್ ಯುವತಿ ಸ್ಪಷ್ಟವಾದ ಉಚ್ಛಾರಣೆಯೊಂದಿಗೆ, ರಾಗವಾಗಿ ಹಾಡುವುದನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಈ ಹುಡುಗಿಯ ಹಾಡು ಈಗ ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ತಲುಪಿದೆ.
ಹಾಡಿನ ವಿಡಿಯೋ ಲಿಂಕ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪುನೀತ್, ಸಂಗೀತಕ್ಕೆ ದೇಶ, ಭಾಷೆ ಅಡ್ಡಿ ಬರೋಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ಧನ್ಯವಾದಗಳು ಎಂದು ಹೊಗಳಿದ್ದಾರೆ.