ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ. ಈ ಸಾಕ್ಷ್ಯ ಚಿತ್ರ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಪುನೀತ್ ಧ್ವನಿಯಲ್ಲೇ, ಅವರೇ ನಟಿಸಿರುವ ಸಾಕ್ಷ್ಯಚಿತ್ರವಿದು. ಕರ್ನಾಟಕ ವನ ಸಂಪತ್ತಿನ ಬಗ್ಗೆ ಬೆಳಕು ಚೆಲ್ಲುವ ಈ ಡಾಕ್ಯುಮೆಂಟರಿ ನವಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯಿದೆ.
ಈಗಾಗಲೇ ಇದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಡಾಕ್ಯುಮೆಂಟರಿಯ ಟೀಸರ್ ನ್ನು ಕಳೆದ ವರ್ಷ ಸಿಎಂ ಬೊಮ್ಮಾಯಿ ರಿಲೀಸ್ ಮಾಡಿದ್ದರು. ಇದೀಗ ಈ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಸಾಕ್ಷ್ಯಚಿತ್ರವನ್ನು ಥಿಯೇಟರ್ ನಲ್ಲೇ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.