Publish Date: Fri, 29 Oct 2021 (14:28 IST)
Updated Date: Fri, 29 Oct 2021 (14:31 IST)
ಬೆಂಗಳೂರು: ಕೊನೆಗೂ ಪ್ರಾರ್ಥನೆ ಫಲಿಸಲಿಲ್ಲ. ಕನ್ನಡ ಚಿತ್ರರಂಗದ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ.
ಇಂದು ತೀವ್ರ ಹೃದಯಾಘಾತದಿಂದಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ ಕುಮಾರ್ 46 ನೇ ವಯಸ್ಸಿಗೆ ಜೀವನದ ಪಯಣ ಮುಗಿಸಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಕ್ರಂ ಆಸ್ಪತ್ರೆ ಅಧಿಕೃತ ಪ್ರಕಟಣೆ ನೀಡಲಿದೆ. ಯಾರೂ ನಿರೀಕ್ಷಿಸದ ಈ ಆಘಾತಕಾರಿ ಸುದ್ದಿ ಇಡೀ ಚಿತ್ರರಂಗ, ಕನ್ನಡ ನಾಡನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.