Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದ ಮೊದಲ ದಿನವಾದ ನಿನ್ನೆ ಅಗಲಿದ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲಾಯಿತು.
ಬ್ರೇಕ್ ವೇಳೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಕ್ರೀಡಾಂಗಣದಲ್ಲಿ ಪ್ಲೇ ಮಾಡಲಾಯಿತು. ಈ ವೇಳೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಮೊಬೈಲ್ ಟಾರ್ಚ್ ಬೆಳಗಿಸಿ ಎದ್ದು ನಿಂತು ಪುನೀತ್ ಗೆ ಗೌರವ ಸಲ್ಲಿಸಿದರು.
ಇದಕ್ಕೂ ಮೊದಲು ಅಂಗವಿಕಲ ಅಭಿಮಾನಿಯೊಬ್ಬ ಅಪ್ಪು ಫೋಟೋ ಹಿಡಿದು ಮೈದಾನದಲ್ಲಿ ಪಂದ್ಯ ವೀಕ್ಷಿಸಿದ ಫೋಟೋ ವೈರಲ್ ಆಗಿತ್ತು. ಈ ಅಭಿಮಾನಿಯೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದ ಕಿಚ್ಚ ಸುದೀಪ್ ಪೋಸ್ ಕೊಟ್ಟರು.