Publish Date: Sat, 10 Oct 2020 (21:34 IST)
Updated Date: Sat, 10 Oct 2020 (21:36 IST)
ಪಿಎಂ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧಾರಿತ ಸಿನಿಮಾ ಮತ್ತೆ ಬಿಡುಗಡೆಗೊಳ್ಳುತ್ತಿದೆ.
ಅಕ್ಟೋಬರ್ 15 ರಂದು ಮತ್ತೆ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಓಮುಂಗ್ ಕುಮಾರ್ ನಿರ್ದೇಶನದ, ಪಿಎಂ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರದಲ್ಲಿ ಮೋದಿ ಪಾತ್ರಧಾರಿಯಾಗಿ ವಿವೇಕ್ ಒಬೆರಾಯ್ ನಟಿಸಿದ್ದಾರೆ.
ಬೊಮನ್ ಇರಾನಿ, ದರ್ಶನ್ ಕುಮಾರ್, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಜರೀನಾ ವಹಾಬ್, ಬರ್ಖಾ ಬಿಶ್ತ್ ಸೆನ್ಗುಪ್ತಾ, ಅಂಜನ್ ಶ್ರೀವಾಸ್ತವ್, ಯತಿನ್ ಕರ್ಯಾಕರ್, ರಾಜೇ ಆರಾಧ್ಯ ಸಲೂಜಾ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪಿಎಂ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧಾರಿತವಾಗಿರುವ ಸಿನಿಮಾ ಮರು ಬಿಡುಗಡೆಯಾಗುತ್ತಿದೆ.