Publish Date: Sat, 16 Apr 2022 (06:30 IST)
Updated Date: Sat, 16 Apr 2022 (06:38 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ವೀಕ್ಷಿಸಿ ಬಂದ ಪ್ರೇಕ್ಷಕರಿಗೆ ಪಾರ್ಟ್ 3 ಬಗ್ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ಕೆಜಿಎಫ್ ಭಾಗ 3 ಬರಲಿದೆ ಎಂಬುದೇ ಪ್ರೇಕ್ಷಕರ ನಿರೀಕ್ಷೆಯಾಗಿತ್ತು. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕೆಜಿಎಫ್ ಎಂಬ ಸಬ್ಜೆಕ್ಟ್ ತುಂಬಾ ವಿಶಾಲವಾದದ್ದು. ಇದನ್ನು ಒಂದೇ ಭಾಗದಲ್ಲಿ ಹೇಳಿ ಮುಗಿಸಲಾಗದು ಎನಿಸಿತ್ತು. ಹೀಗಾಗಿ ಎರಡನೇ ಭಾಗವಾಗಿ ಸಿನಿಮಾ ಮಾಡಿದೆವು.
ಆದರೆ ಈಗ ಮೂರನೇ ಭಾಗ ಮಾಡುವ ಯೋಜನೆಯಿಲ್ಲ. ಈಗ ಅನಗತ್ಯವಾಗಿ ಮತ್ತಷ್ಟು ಕತೆ ತೂರಿಸಿ ಮೂರನೇ ಭಾಗ ಮಾಡುವ ಬಗ್ಗೆ ಯೋಚನೆ ಕೂಡಾ ಮಾಡಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.