ಬೆಂಗಳೂರು: ಬಹುಭಾಷಾ ತಾರೆ ಪ್ರಕಾಶ್ ರೈ ಇತ್ತೀಚೆಗಿನ ದಿನಗಳಲ್ಲಿ ಬಲಪಂಥೀಯ ಸಂಘಟನೆಗಳ ವಿರುದ್ಧ ಕಿಡಿ ಕಾರುತ್ತಿರುವ ಬೆನ್ನಲ್ಲೇ ಅವರನ್ನು ಖಾಸಗಿ ಪತ್ರಿಕೆಯೊಂದರ ಅಂಕಣದಿಂದ ಕಿತ್ತು ಹಾಕಲಾಗಿದೆ.
ಪ್ರತೀ ಭಾನುವಾರಗಳಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಾಶ್ ರೈ ಅಂಕಣ ಬರೆಯುತ್ತಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ಅಂಕಣದಿಂದ ಕಿತ್ತು ಹಾಕಿರುವುದಕ್ಕೆ ನಟ ಪ್ರಕಾಶ್ ರೈ ತಮ್ಮ ಟ್ವಿಟರ್ ಪೇಜ್ ನಲ್ಲಿ ಕಿಡಿ ಕಾರಿದ್ದಾರೆ.
‘ಯಾವುದೇ ಮುನ್ಸೂಚನೆಯಿಲ್ಲದೇ ನನ್ನ ಅಂಕಣ ನಿಲ್ಲಿಸಲಾಗಿದೆ. ಇದರ ಹಿಂದೆ ಯಾವ ಕೈ ಕೆಲಸ ಮಾಡಿದೆ ಎಂದು ನನಗೆ ಗೊತ್ತು’ ಎಂದು ಪ್ರಕಾಶ್ ರೈ ಮತ್ತೆ ತಮ್ಮ ವಿರೋಧಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ