Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊರ್ಕಿ ಸಿನಿಮಾದ ನಾಯಕಿ ಪ್ರಣಿತಾ ಸುಭಾಷ್‌ಗೆ ಗಂಡು ಮಗು ಜನನ

Pranitha Subash

Sampriya

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (14:03 IST)
Photo Courtesy X
ಪೊರ್ಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಣಿತಾ ಸುಭಾಷ್ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

2021ರಲ್ಲಿ ಗೆಳೆಯ ನಿತಿನ್ ರಾಜ್ ಅವರನ್ನು ಕೈ ಹಿಡಿದ ಪ್ರಣಿತಾ ಅವರು ಮೊದಲ ಹೆಣ್ಣು ಮಗುವನ್ನು 2022ರಲ್ಲಿ ಬರಮಾಡಿಕೊಂಡರು. ಇದೀಗ ಮಗಳಿಗೆ ತಮ್ಮನ ಆಗಮನದ ಬಗ್ಗೆ ಪ್ರಣಿತಾ ಖುಷಿ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳು ಆರ್ನಾ ಮಗನಿಗೆ ಬೇಬಿ ಅಂತಲೆ ಕರೆಯುತ್ತಾಳೆ. ಇದನ್ನ ಕೇಳಿದಾಗ ಖುಷಿ ಆಗುತ್ತದೆ ಅಂತಲೂ ಪ್ರಣಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗಂಡು ಮಗು ಹುಟ್ಟಿದ್ಮೇಲೆ ಮಗುವಿನೊಂದಿಗೆ ಒಂದು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಆ ಫೋಟೋದಲ್ಲಿ ಅಮ್ಮ ಮತ್ತು ಮಗ ಇಬ್ಬರು ಮುದ್ದಾಗಿಯೇ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಪ್ರಣಿತಾ ಅವರು ತೆಲುಗು ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು.

ಇದೀಗ ಬಣ್ಣದ ಲೋಕದಿಂದ ದೂರ ಉಳಿದಿರುವ ಪ್ರಣಿತಾ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ತನಿಖೆಗೆ ಚೇತನ್ ಅಹಿಂಸಾ ನಿಯೋಗ ಸಿಎಂ ಸಿದ್ದರಾಮಯ್ಯಗೆ ಮನವಿ