Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಕ್ಕಮಗಳೂರು: ವೀಕೆಂಡ್ ಕರ್ಫ್ಯೂ ನಡುವೆಯೂ ಧಾರವಾಹಿ ಶೂಟಿಂಗ್ ನಡೆಸುತ್ತಿದ್ದ ತಂಡಕ್ಕೆ ಎಚ್ಚರಿಕೆ ನೀಡಿ ಶೂಟಿಂಗ್ ಬಂದ್ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಾಫಿ ಕೆಫೆಯೊಂದರಲ್ಲಿ ಧಾರವಾಹಿ ತಂಡ ತಮಗೂ ಕರ್ಫ್ಯೂಗೂ ಸಂಬಂಧವೇ ಇಲ್ಲದವರಂತೆ ಶೂಟಿಂಗ್ ನಡೆಸುತ್ತಿದ್ದರು. ಇಲ್ಲಿಗೆ ದಾಳಿ ನಡೆಸಿದ ಪೊಲೀಸರ ತಂಡ ಪ್ಯಾಕಪ್ ಮಾಡಿಸಿ ಕಲಾವಿದರನ್ನು ಮನೆಗೆ ಕಳುಹಿಸಿದೆ.
ಸಂಜೆ ವೇಳೆ ಇಲ್ಲಿ ತಿಂಡಿ ತಿನ್ನುವ ದೃಶ್ಯವೊಂದರ ಚಿತ್ರೀಕರಣಕ್ಕೆ ಸಿದ್ಧತೆಯಾಗಿತ್ತು. ಆದರೆ ಪೊಲೀಸರ ಎಂಟ್ರಿಯಾದ ತಕ್ಷಣ ಶೂಟಿಂಗ್ ಪ್ಯಾಕಪ್ ಆಗಿದೆ.