Select Your Language

Notifications

webdunia
webdunia
webdunia
webdunia

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

ನಟ ರಜನಿಕಾಂತ್

Sampriya

ಬೆಂಗಳೂರು , ಗುರುವಾರ, 1 ಮೇ 2025 (17:39 IST)
Photo Credit X
ಬೆಂಗಳೂರು: ನಟ ರಜನಿಕಾಂತ್ ಅವರು ಗುರುವಾರ ವರ್ಲ್ಡ್ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ (ವೇವ್ಸ್) ಶೃಂಗಸಭೆ 2025 ರಲ್ಲಿ ವೇದಿಕೆಯಲ್ಲಿ ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯ ಬಗ್ಗೆ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ತರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೋರಾಟಗಾರ. ಅವರು ಯಾವುದೇ ಸವಾಲನ್ನು ಎದುರಿಸುತ್ತಾರೆ. ಕಳೆದ ದಶಕದಿಂದ ನಾವು ಹೇಳುತ್ತಿರುವುದನ್ನು ಸಾಬೀತುಪಡಿಸುತ್ತಾರೆ, ಈ ಘಟನೆಯನ್ನು ಅವರು ಧೈರ್ಯದಿಂದ ಎದುರಿಸಿ, ಜಮ್ಮು ಕಾಶ್ಮೀರದಲ್ಲಿ ಮತ್ಥೇ ಶಾಂತಿ ಮತ್ತು ದೇಶಕ್ಕೆ ಕೀರ್ತಿ ತರುತ್ತಾರೆ ಎಂದರು.

ತೈಲವರ್ ಅವರು ಶೃಂಗಸಭೆಯ ಭಾಗವಾಗಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ ಮತ್ತು ಈ ವೇವ್ಸ್ ಕ್ಷಣದ ಭಾಗವಾಗಲು ನನ್ನ ಸೌಭಾಗ್ಯವಾಗಿದೆ. ಜಾಗತಿಕ ಮನರಂಜನಾ ಬಂಧುತ್ವದ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಮಾಧ್ಯಮಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮೆಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಅವಕಾಶಕ್ಕಾಗಿ ತುಂಬಾ ಧನ್ಯವಾದಗಳು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ