ಕನ್ನಡದ ನಟಿ ಪವಿತ್ರಾ ಲೋಕೇಶ್ ಸದ್ಯ ತೆಲುಗು ಚಿತ್ರರಂಗದಲ್ಲಿ ಮನೆ ಮಾತಾಗಿದ್ದಾರೆ. ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ತಾಯಿ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ಬಹುತೇಕ ಯುವನಟರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪವಿತ್ರಾ ಲೋಕೇಶ್, ಈ ನಟರ ಬಗೆಗಿನ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನ ತೆಲುಗು ಜಾಲತಾಣದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಜೊತೆಗಿನ ಕೆಲಸದ ಅನುಭವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪವಿತ್ರಾ ಲೋಕೇಶ್, ಚರಣ್ ಲವಬಲ್ ಕೂಲ್ ಹುಡುಗ ಮತ್ತು ಸೋಮಾರಿಯೂ ಹೌದು. ಮಕ್ಕಳನ್ನ ಪಡೆಯುವುದರ ಬಗ್ಗೆ ಕೇಳಿದ್ದಕ್ಕೆ, ನಾನೇ ಒಂದು ಮಗು ನನಗೀಗ ಮಕ್ಕಳ ಅವಶ್ಯಕತೆ ಇಲ್ಲ ಎಂದರಂತೆ.
ರೇಸ್ ಗುರಂ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗಿನ ಕೆಲಸದ ಅನುಭವದ ಬಗ್ಗೆ ಕೇಳಿದಾಗ. ಅವನು ನನ್ನನ್ನ ಸ್ವಿಟ್ ಮಮ್ಮಿ ಎಂದು ಕರೆಯುತ್ತಿರುತ್ತಾನೆ. ಅವನು ನನ್ನ ಫೇವರೇಟ್ ಸನ್. ಬನ್ನಿಗೆ ತಾಯಿಯಾಗಿ ನಟಿಸಲು ನಾನೂ ಯಾವಾಗಲೂ ಇಷ್ಟಪಡುತ್ತೇನೆ’ ಎಂದಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಲೇಟೆಸ್ಟ್ ಮೂವಿ ಕಾಟಮರಾಯುಡು ಕುರಿತಂತೆಯೂ ಹೇಳಿರುವ ಪವಿತ್ರಾ ಲೋಕೇಶ್, ನಾನು ಪವನ್ ಕಲ್ಯಾಣ್ ಅವರ ದೊಡ್ಡ ಫ್ಯಾನ್ ಎಂದಿದ್ದಾರೆ.