2016 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಥಮ ಅತ್ಯುತ್ತಮ ಚಿತ್ರಕ್ಕೆ ಅಮರಾವತಿ ಆಯ್ಕೆಯಾಗಿದ್ದು, ಎರಡನೇ ಅತ್ಯುತ್ತಮ ಪ್ರಶಸ್ತಿಯನ್ನು ರೈಲ್ವೆ ಚಿಲ್ಡ್ರನ್ ಬಾಚಿಕೊಂಡಿದೆ. ಮೂರನೇ ಅತ್ಯುತ್ತಮ ಚಿತ್ರವಾಗಿ ಅಂತರ್ಜಲ ಹೊರಹೊಮ್ಮಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಚಿತ್ರನಿರ್ದೇಶಕಿ ಕವಿತಾ ಲಂಕೇಶ್ ನೇತೃತ್ವದಲ್ಲಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಾಡಲು ಎಂಟು ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು ಎಂದು ಹೇಳಿದ್ದಾರೆ.
ವರನಟ,ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಜನ್ಮದಿನವಾದ ಏಪ್ರಿಲ್ 24 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಅಚ್ಯುತ್‌ಕುಮಾರ್, ಶ್ರುತಿ ಹರಿಹರನ್ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿಗಳು
ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ
ರೈಲ್ವೆ ಚಿಲ್ಡ್ರನ್ ದ್ವಿತೀಯ ಅತ್ಯುತ್ತಮ ಚಿತ್ರ
ಅಂತರ್ಜಲ ಮೂರನೇ ಅತ್ಯುತ್ತಮ ಚಿತ್ರ
ಕಿರಿಕ್ ಪಾರ್ಟಿ ಅತ್ಯುತ್ತಮ ಮನರಂಜನಾ ಚಿತ್ರ
ರೈಲ್ವೆ ಚಿಲ್ಡ್ರನ್ ನಟನೆಗಾಗಿ ಮನೋಹರ್ ಗೆ ಪ್ರಶಸ್ತಿ
ವಿಜಯ್ ಪ್ರಕಾಶ್ ಅತ್ಯುತ್ತಮ ಹಿನ್ನೆಲೆ ಗಾಯಕ
ಸಂಗೀತಾ ರವೀಂದ್ರನಾಥ್ ಅತ್ಯುತ್ತಮ ಹಿನ್ನೆಲೆ ಗಾಯಕಿ(ಜಲ್ಸಾ)
ನಂದಿತಾ ಯಾದವ್ ಅತ್ಯುತ್ತಮ ಕಥೆ(ರಾಜು ಎದೆಗೆ ಬಿದ್ದ ಅಕ್ಷರ)
ನವೀನ್ ಡಿ ಪಡೀಲ್ ಅತ್ಯುತ್ತಮ ಪೋಷಕ ನಟ(ಕುಡ್ಲ ಕೆಫೆ)
ಅಕ್ಷತಾ ಪಾಂಡವಪುರ ಅತ್ಯುತ್ತಮ ಪೋಷಕ ನಟಿ(ಪಲ್ಲಟ)
ಬಿಎಂ ಗಿರಿರಾಜು ಅತ್ಯುತ್ತಮ ಸಂಭಾಷಣೆ(ಅಮರಾವತಿ)
ಅರವಿಂದ ಶಾಸ್ತ್ರಿ ಅತ್ಯುತ್ತಮ ಚಿತ್ರಕಥೆ(ಕಹಿ)
ಎಂ.ಆರ್ ಚರಣ್ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶನ
ಸಿ.ರವಿಚಂದ್ರನ್ ಅತ್ಯುತ್ತಮ ಸಂಕಲನ
ಕಾರ್ತಿಕ್ ಸರಗೂರು ಅತ್ಯುತ್ತಮ ಗೀತ ರಚನೆ
ವಸ್ತ್ರಾಲಂಕಾರ ವಿಭಾಗದಲ್ಲಿ ಚಿನ್ಮಯ್ ಗೆ ಪ್ರಶಸ್ತಿ
ರಾಮಾ ರಾಮಾರೇ ಮೊದಲ ನಿರ್ದೇಶನದ ಅತ್ಯುತ್ತಮ ಚಿತ್ರ
ಮೂಡಲ ಸೀಮೆಯಲಿ ಅತ್ಯುತ್ತಮ ಸಾಮಾಜಿಕ ಚಿತ್ರ
ತುಳು ಚಿತ್ರ ಮುದಿಪು ಅತ್ಯುತ್ತಮ ಪ್ರಾದೇಶಿಕ ಚಿತ್ರ
ಜೀರ್ ಜಿಂಬೆ ಅತ್ಯುತ್ತಮ ಮಕ್ಕಳ ಚಿತ್ರ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.