ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡಗೆ ಜಾಮೀನು ನಿರಾಕರಣೆ ಆಗುತ್ತಿದ್ದ ಹಾಗೇ, ಅತ್ತ ಸುಬ್ಬಿ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ.
ಈ ಪ್ರಕರಣದಲ್ಲಿ ಪವಿತ್ರಾ ಗೌಡನೇ ಸೂತ್ರಧಾರಿ ಎಂದು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರ ಪಾತ್ರ ಏನಿಲ್ಲ ಎಂದು ಆಕೆ ಪರ ವಕೀಲ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಇದೀಗ ಪವಿತ್ರಾ ಗೌಡ ಜಾಮೀನು ನೀಡಲು ನಿರಾಕರಣೆ ವ್ಯಕ್ತಪಡಿಸಿದೆ. ಇದರಿಂದ ಪವಿತ್ರಾ ಗೆ ಕಾನೂನು ಅಡಿಯಲ್ಲಿ ಮತ್ತೇ ಸೋಲಾಗಿದೆ.
ಇಂದು ಜಾಮೀನಿನ ನಿರೀಕ್ಷೆಯಲ್ಲಿ ಪವಿತ್ರಾ ಗೌಡ, ಅತ್ತ ಕೋರ್ಟ್ ಜಾಮೀನು ಅರ್ಜಿ ನಿರಾಕರಣೆ ಮಾಡುತ್ತಿದ್ದ ಹಾಗೇ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ನಿನ್ನೆ ರಾತ್ರಿಯಿಂದನೂ ಪವಿತ್ರಾ ಗೌಡ ಜಾಮೀನು ಹಿನ್ನೆಲೆ ಚಿಂತೆಗೆ ಒಳಗಾಗಿದ್ದರು. ಬೆಳಗ್ಗೆಯಿಂದಲೂ ಟೆನ್ಷನ್‌ನಲ್ಲಿದ್ದ ಪವಿತ್ರಾ, ಜಾಮೀನು ಸಿಗದಿರುವುದಕ್ಕೆ ಕಣ್ಣೀರು ಹಾಕಿದ್ದಾರೆ.