Select Your Language

Notifications

webdunia
webdunia
webdunia
webdunia

ಮತ್ತೆ ಮದುವೆ ಕಾನೂನು ಸಂಕಷ್ಟ ದೂರ: ನರೇಶ್-ಪವಿತ್ರಾ ಸಿನಿಮಾ ಭರ್ಜರಿ ಓಪನಿಂಗ್

Dr. Naresh V.K
ಹೈದರಾಬಾದ್ , ಶುಕ್ರವಾರ, 26 ಮೇ 2023 (09:00 IST)
Dr. Naresh V.K
ಹೈದರಾಬಾದ್: ಎಲ್ಲಾ ಅಡೆತಡೆಗಳನ್ನು ದಾಟಿ ಪವಿತ್ರಾ ಲೋಕೇಶ್-ನರೇಶ್ ನಿರ್ಮಿಸಿ, ಅಭಿನಯಿಸಿರುವ ಮಳ್ಳಿ ಪೆಳ್ಳಿ ಸಿನಿಮಾ ಕೊನೆಗೂ ರಿಲೀಸ್ ಆಗಿದೆ.

ಕನ್ನಡದಲ್ಲಿ ಈ ಸಿನಿಮಾ ಮತ್ತೆ ಮದುವೆ ಎನ್ನುವ ಟೈಟಲ್ ನೊಂದಿಗೆ ರಿಲೀಸ್ ಆಗಿದೆ. ನಿನ್ನೆ ದಿನ ಈ ಸಿನಿಮಾ ರಿಲೀಸ್ ಗೆ ಕೆಲವೇ ಕ್ಷಣಗಳ ಮೊದಲು ನರೇಶ್ ಮಾಜಿ ಪತ್ನಿ ರಮ್ಯಾ ಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿ ದೂರು ಸಲ್ಲಿಸಿದ್ದರು.

ಆದರೆ ಈ ಕಾನೂನು ಸಂಕಷ್ಟಗಳೆಲ್ಲಾ ಪರಿಹಾರವಾಗಿದ್ದು, ಸಿನಿಮಾ ಥಿಯೇಟರ್ ನಲ್ಲಿ ವೀಕ್ಷಿಸಿ ಎಂದು ನರೇಶ್ ಟ್ವೀಟ್ ಮಾಡಿದ್ದಾರೆ. ಅದರಂತೆ ಇಂದು ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. ಗಲ್ಲಾಪೆಟ್ಟಿಗೆಯಲ್ಲಿ ಇದು ಭಾರೀ ಗಳಿಕೆ ಮಾಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ