ರೇಣುಕಾಸ್ವಾಮಿ ಮರ್ಡರ್ ವೇಳೆ ಹಾಕಿದ್ದ ಚಪ್ಪಲಿಯಿಂದ ಪವಿತ್ರಾ ಗೌಡಗೆ ಕಂಟಕ

Krishnaveni K
ಬುಧವಾರ, 14 ಆಗಸ್ಟ್ 2024 (14:16 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಆಕೆಯ ಚಪ್ಪಲಿಯೇ ಈಗ ಪ್ರಮುಖ ಸಾಕ್ಷಿಯಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿ ದರ್ಶನ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಇದರ ಪರಿಣಾಮ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಎನ್ನುವುದು ಆರೋಪ. ಹಲ್ಲೆ ವೇಳೆ ಪವಿತ್ರಾ ಗೌಡ ಕೂಡಾ ಪಟ್ಟಣಗೆರೆ ಶೆಡ್ ಗೆ ಬಂದಿದ್ದರು. ಅವರೂ ಕೂಡಾ ತಮ್ಮ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.

ಇದೀಗ ಪವಿತ್ರಾ ಕೂಡಾ 17 ಆರೋಪಿಗಳಲ್ಲಿ ಒಬ್ಬರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪವಿತ್ರಾ ಧರಿಸಿದ್ದ ಚಪ್ಪಲಿಯನ್ನು ಅವರ ಮನೆ ಮಹಜರಿನ ವೇಳೆ ವಶಪಡಿಸಿಕೊಂಡಿದ್ದ ಪೊಲೀಸರು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದರು. ಇದೀಗ ಅವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಸಾಬೀತಾಗಿದೆ.

ಇನ್ನು, ಪಟ್ಟಣಗೆರೆ ಶೆಡ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ಸೇವಿಸಿದ್ದ ಬಿಯರ್ ಬಾಟಲಿಯೊಂದರಲ್ಲೂ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ. ಈ ಎರಡೂ ವಿಚಾರಗಳೂ ಈಗ ಆರೋಪಿಗಳ ವಿರುದ್ಧ ಮತ್ತಷ್ಟು ಸಾಕ್ಷ್ಯ ಒದಗಿಸಿದಂತಾಗಿದೆ. ಅದರಲ್ಲೂ ಎ1 ಪವಿತ್ರಾ ಗೌಡ ಚಪ್ಪಲಿಯೇ ಈಗ ಆಕೆಗೆ ಕಂಟಕವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments