ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಗಂಡು ಮಗುವಿಗೆ ತಂದೆಯಾದ ಡಬಲ್ ಖುಷಿಯಲ್ಲಿದ್ದಾರೆ.
ಪವನ್ ಪತ್ನಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ಇಂದು ಪವನ್ ಬರ್ತ್ ಡೇ. ಹೀಗಾಗಿ ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪವನ್ ಹುಟ್ಟುಹಬ್ಬಕ್ಕೆ ಇದಕ್ಕಿಂತ ಒಳ್ಳೆಯ ಉಡುಗೊರೆ ಸಿಗಲು ಸಾಧ್ಯವಿಲ್ಲ. ನಮಗೆ ಗಂಡು ಮಗುವಾಗಿದೆ ಎಂದು ಖುಷಿ ಸಂಗತಿ ಹಂಚಿಕೊಂಡಿದ್ದಾರೆ.