ಎಂ.ರಮೇಶ್ ರೆಡ್ಡಿಯವರು ಅಪ್ಪಟ ಸಿನಿಮಾ ಪ್ರೇಮದಿಂದ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಈ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಭಿನ್ನವಾದೊಂದು ಪಾತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಹೊಸಾ ಹುಡುಗನ ಚಿತ್ರವೊಂದು ಅಗಾಧ ಪ್ರಮಾಣದಲ್ಲಿ ಕ್ರೇಜ್ ಹುಟ್ಟಿಸಿದ ರೀತಿಯೂ ಸೇರಿದಂತೆ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಭರವಸೆಯಿಟ್ಟಿರೋದಕ್ಕೆ ದಂಡಿ ದಂಡಿ ಕಾರಣಗಳಿವೆ.
ಗುರುದೇಶಪಾಂಡೆ ನಿರ್ದೇಶನ ಮಾಡಿರೋ ಚಿತ್ರ ಪಡ್ಡೆಹುಲಿ. ಈ ಹಿಂದೆ ರಾಜಾಹುಲಿ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರಿಗೇ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿದ್ದವರು ಗುರುದೇಶಪಾಂಡೆ. ಪಡ್ಡೆಹುಲಿಯನ್ನೂ ಕೂಡಾ ಅವರು ಅಂಥಾದ್ದೇ ಶ್ರದ್ಧೆ ಮತ್ತು ಕ್ರಿಯಾಶೀಲತೆಯಿಂದಲೇ ರೂಪಿಸಿದ್ದಾರೆ. ಆದ್ದರಿಂದಲೇ ಈ ಚಿತ್ರದ ಮೂಲಕ ಮತ್ತೋರ್ವ ಮಾಸ್ ಹೀರೋ ಹುಟ್ಟಿಕೊಳ್ಳುವ ಲಕ್ಷಣಗಳೇ ಎಲ್ಲಡೆ ಕಾಣಿಸುತ್ತಿದೆ.
ನಾಯಕನಾಗಿ ಶ್ರೇಯಸ್ ಪಾಲಿಗೆ ಇದು ಮೊಟ್ಟಮೊದಲ ಚಿತ್ರ. ಆದರೆ ಟ್ರೈಲರ್ ಮತ್ತು ಹಾಡುಗಳನ್ನು ನೋಡಿದವರಿಗೆಲ್ಲ ಈ ಮಾತನ್ನು ನಂಬೋದು ತುಸು ಕಷ್ಟವಾಗುವಂತಿದೆ. ಯಾಕೆಂದರೆ, ಶ್ರೇಯಸ್ ಪಕ್ಕಾ ಪಳಗಿದ ನಟನಂತೆ, ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವವರಂತೆ ಅಬ್ಬರಿಸಿದ್ದಾರೆ. ಅತ್ತ ನಿರ್ದೇಶಕ ಗುರು ದೇಶಪಾಂಡೆಯವರ ಶ್ರದ್ಧೆ ಇತ್ತ ನಿರ್ಮಾಪಕರಾದ ಎಂ. ರಮೇಶ್ ರೆಡ್ಡಿಯವರ ಸಿನಿಮಾ ಪ್ರೇಮದ ಜೊತೆಗೆ ಶ್ರೇಯಸ್ ಅವರ ಶ್ರಮವೂ ಸೇರಿಕೊಂಡು ಪಡ್ಡೆಹುಲಿ ಪೊಗದಸ್ತಾಗಿಯೇ ರೆಡಿಯಾಗಿದೆ.
ಹೀಗೆ ಎಲ್ಲ ದಿಕ್ಕುಗಳಿಂದಲೂ ಪರಿಪೂರ್ಣವಾಗಿ ಸಿದ್ಧಗೊಂಡಿರುವ ಪಡ್ಡೆಹುಲಿ ಇದೇ ಏಪ್ರಿಲ್ ಹತ್ತೊಂಭತ್ತರಂದು ಥೇಟರುಗಳಲ್ಲಿ ಘರ್ಜಿಸಲಿದೆ!
ಮಣ್ಣ ಘಮಲಿನಿಂದ ಎದ್ದುಬಂದ ಪಡ್ಡೆಹುಲಿ!
ಈಗ ಎತ್ತ ನೋಡಿದರೂ ಪಡ್ಡೆಹುಲಿಯದ್ದೇ ಅಬ್ಬರ. ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಗೂ ಮುನ್ನ ಎಲ್ಲಡೆ ಸಂಚಲನ ಸೃಷ್ಟಿಸೋದು ಮಾಮೂಲು ವಿದ್ಯಮಾನ. ಆದರೆ ಹೊಸಾ ಹುಡುಗ ಹೀರೋ ಆಗಿ ಪರಿಚಯವಾಗುವ ಮೊದಲ ಚಿತ್ರದಲ್ಲಿಯೇ ಈ ಪಾಟಿ ಅಬ್ಬರಿಸೋದು ಕನ್ನಡದ ಮಟ್ಟಿಗೆ ಬಲು ಅಪರೂಪದ ಬೆಳವಣಿಗೆ. ಅಂಥಾದ್ದೊಂದು ಅಪರೂಪದ ಪಲ್ಲಟಗಳ ಜೊತೆಯೇ ಪಡ್ಡೆಹುಲಿ ಚಿತ್ರ ತೆರೆ ಕಾಣಲು ಅಣಿಯಾಗಿದೆ.
ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಎಂ ರಮೇಶ್ ರೆಡ್ಡಿಯವರು ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದನ್ನು ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಪಡ್ಡೆಹುಲಿಯ ಬಗ್ಗೆ ಈವತ್ತಿಗೆ ಇಂಥಾದ್ದೊಂದು ಸಂಚನ ಚಾಲ್ತಿಯಲ್ಲಿದೆಯೆಂದರೆ ಅದಕ್ಕೆ ಗುರುದೇಶಪಾಂಡೆಯವರ ರಾಜಾಹುಲಿ ಫೇಮೂ ಕೂಡಾ ಪ್ರಧಾನ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ.
ಪಡ್ಡೆಹುಲಿ ಚಿತ್ರದ ಮೂಲಕ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಶ್ರೇಯಸ್ ಅವರನ್ನು ನಿರ್ದೇಶಕ ಗುರುದೇಶಪಾಂಡೆ ಪಕ್ಕಾ ಮಣ್ಣಿನ ಸೊಗಡಿನ ಕಥೆಯೊಂದರ ಮೂಲಕವೇ ಅದ್ದೂರಿಯಾಗಿ ಲಾಂಚ್ ಮಾಡಲು
ಸಿನಿಮಾ ಮೂಲಕ ಶ್ರೇಯಸ್ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಅವರಿಗೆ ನಾಯಕಿಯಾಗಿ ಜೋಡಿಯಾಗಿರೋದು ನಿಶ್ವಿಕಾ ನಾಯ್ಡು!
ಪಡ್ಡೆಹುಲಿ ಚಿತ್ರ ಇದೀಗ ಬರೋಬ್ಬರಿ ಹನ್ನೊಂದು ಹಾಡುಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಪ್ರತಿಯೊಂದು ಹಾಡೂ ಕೂಡಾ ತನ್ನದೇ ರೀತಿಯಲ್ಲಿ ಮೋಡಿ ಮಾಡಿ ಟ್ರೆಂಡಿಂಗ್ ನಲ್ಲಿದೆ. ಇಂಥಾ ಹಾಡುಗಳ ಮೂಲಕವೇ ನಾಯಕ ಶ್ರೇಯಸ್ ಕೂಡಾ ಶೈನಲ್ ಆಗಿದ್ದಾರೆ. ಅದೇ ರೀತಿ ಅವರಿಗೆ ಜೋಡಿಯಾಗಿ ಹೆಜ್ಜೆ ಹಾಕುವ ಮೂಲಕ ನಿಶ್ವಿಕಾ ನಾಯ್ಡು ಕೂಡಾ ಮನಗೆದ್ದಿದ್ದಾರೆ.
ಈಗಾಗಲೇ ಈ ಹಾಡುಗಳ ಮೂಲಕವೇ ಶ್ರೇಯಸ್ ಮತ್ತು ನಿಶ್ವಿಕಾ ನಾಯ್ಡು ಚೆಂದದ ಜೋಡಿ ಅಂತ ಬಿಂಬಿತರಾಗಿದ್ದಾರೆ. ನಾಯಕನಾಗಿ ಶ್ರೇಯಸ್ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುಳಿವು ಈಗಾಗಲೇ ಸಿಕ್ಕಿದೆ. ಆದರೆ, ನಾಯಕಿ ನಿಶ್ವಿಕಾ ಎಂಥಾ ಪಾತ್ರದಲ್ಲಿ ನಟಿಸಿದ್ದಾರೆಂಬ ಸುಳಿವು ಮಾತ್ರ ಸಿಕ್ಕಿಲ್ಲ. ಅದನ್ನು ಚಿತ್ರತಂಡವೂ ಗೌಪ್ಯವಾಗಿಟ್ಟಿದೆ. ನಿಶ್ವಿಕಾ ಎಲ್ಲ ಎಲ್ಲರಿಗೂ ಆಪ್ತವಾಗುವಂಥಾ ಪಾತ್ರದಲ್ಲಿ ನಟಿಸಿದ್ದಾರೆಂಬುದಂತೂ ಸತ್ಯ.
ಪಡ್ಡೆಹುಲಿಯ ಜೊತೆ ಕಿರಿಕ್ ಕರ್ಣನ ಕಿತಾಪತಿ!
ಶ್ರೇಯಸ್ ನಾಯಕರಾಗಿ ನಟಿಸಿರುವ ಪಡ್ಡೆಹುಲಿ ಈಗ ಪ್ರತೀ ವರ್ಗಗಳ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಎಂ.ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ತೆರೆ ಕಾಣುತ್ತಿದೆ.
ಈ ಹಿಂದೆ ರಾಜಾಹುಲಿ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಗುರುದೇಶಪಾಂಡೆಯವರು ಪಡ್ಡೆಹುಲಿಯನ್ನೂ ನಿರ್ದೇಶನ ಮಾಡಿದ್ದಾರೆ. ರಾಜಾಹುಲಿ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರೇ ಶೈನಪ್ ಆಗಿದ್ದರು. ಇದೀಗ ಪಡ್ಡೆಹುಲಿಯ ಮೂಲಕ ಶ್ರೇಯಸ್ ಎಂಬ ಮತ್ತೋರ್ವ ಮಾಸ್ ಹೀರೋನ ಆಗಮನವಾಗೋದು ಖಾತರಿಯಾಗಿದೆ.
ಅಂದಹಾಗೆ ಈ ಚಿತ್ರವನ್ನು ಪ್ರತಿಯೊಂದು ರೀತಿಯಲ್ಲಿಯೂ ಆಕರ್ಷಕವಾಗಿ ರೂಪಿಸುವಲ್ಲಿ ಗುರು ದೇಶಪಾಂಡೆ ಶ್ರಮ ವಹಿಸಿದ್ದಾರೆ. ಪಡ್ಡೆಹುಲಿಯ ಆಕರ್ಷಣೆಗಳು ಹಲವಾರಿವೆ. ಅದರಲ್ಲಿ ಪಾತ್ರವರ್ಗವೂ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಪಡ್ಡೆಹುಲಿಗೆ ವಿಭಿನ್ನ ಪಾತ್ರಗಳ ಮೂಲಕ ಸಾಥ್ ಕೊಟ್ಟಿದ್ದಾರೆ. ಅದೇ ರೀತಿ ರಕ್ಷಿತ್ ಶೆಟ್ಟಿ ಕೂಡಾ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ರಕ್ಷಿತ್ ಇಲ್ಲಿ ಯಾವ ಪಾತ್ರ ಮಾಡಿದ್ದಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಚಿತ್ರತಂಡ ಒಂದು ಅಚರ್ಚರಿಯ ಸಂಗತಿಯನ್ನು ಬಿಟ್ಟು ಕೊಟ್ಟಿದೆ. ಆ ಪ್ರಕಾರವಾಗಿ ನೋಡೋದಾದರೆ, ರಕ್ಷಿತ್ ಕಿರಿಕ್ ಪಾರ್ಟಿಯ ಪ್ರಸಿದ್ಧ ಪಾತ್ರವಾದ ಕರ್ಣನಾಗಿಯೇ ನಟಿಸಿದ್ದಾರೆ. ಅವರ ಪಾತ್ರವಿಲ್ಲಿ ಕಿರಿಕ್ ಪಾರ್ಟಿಯ ಮುಂದುವರೆದ ಭಾಗದಂತಿದೆಯಂತೆ. ಕಿರಿಕ್ ಪಾರ್ಟಿಯ ಕರ್ಣ ಪಡ್ಡೆಹುಲಿಯ ಜೊತೆ ಸೇರಿ ಎಂಥಾ ಕಿತಾಪತಿ ಮಾಡಿದ್ದಾನೆಂಬುದು ಏಪ್ರಿಲ್ ಹತ್ತೊಂಭತ್ತರಂದು ಗೊತ್ತಾಗಲಿದೆ.
ಮುಂದಾಗಿದ್ದಾರೆ. ರಾಜಾಹುಲಿ ಸೇರಿದಂತೆ ನಿರ್ದೇಶನ ಮಾಡಿದ ಎಲ್ಲ ಚಿತ್ರಗಳಲ್ಲಿಯೂ ಮಣ್ಣಿನ ಘಮಲಿನ ಕಥೆ ಹೇಳಿದ್ದವರು ಗುರುದೇಶಪಾಂಡೆ. ಈ ಕಾರಣದಿಂದಲೇ ಈ ಪಡ್ಡೆಹುಲಿ ಕೂಡಾ ಅಂಥಾದ್ದೇ ಮಣ್ಣಿನ ಘಮಲಿನಿಂದ ಎದ್ದು ಬಂದಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಕಟ್ಟಿಕೊಟ್ಟಿದ್ದಾರಂತೆ.
ಮಧ್ಯಮವರ್ಗದ ಹುಡುಗನೊಬ್ಬನ ಆತ್ಮಕಥೆಯಂತಿರೋ ಈ ಚಿತ್ರ ಪಕ್ಕಾ ಎಂಟರ್ಟೈವನ್ಮೆಂಟ್ ಪ್ಯಾಕೇಜ್. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಈ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಲವ್, ಕಾಮಿಡಿ, ಮಾಸ್ ಸನ್ನಿವೇಶಗಳು ಸೇರಿದಂತೆ ಎಲ್ಲ ಅಂಶಗಳೂ ಇವೆ.
ಈ ಪಡ್ಡೆಹುಲಿ ಪಕ್ಕಾ ವಿಷ್ಣುಭಕ್ತ!
ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಅದ್ದೂರಿ ಎಂಟ್ರಿ ಕೊಡುತ್ತಿರುವ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ಬಿಡುಗಡೆಯಾಗಲಿದೆ.
ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಶ್ರೇಯಸ್ ಪಕ್ಕಾ ವಿಷ್ಣುಭಕ್ತನಾಗಿ ನಟಿಸಿದ್ದಾರೆ. ಈಗಾಗಲೇ ಹಾಡುಗಳಲ್ಲಿ ವಿಷ್ಣು ಗೆಟಪ್ಪಿನಲ್ಲಿಯೇ ನಟಿಸೋ ಮೂಲಕ ಶ್ರೇಯಸ್ ಸಾಹಸ ಸಿಂಹನ ಸಮಸ್ತ ಅಭಿಮಾನಿಗಳ ಪ್ರೀತಿಗೂ ಪಾತ್ರರಾಗಿದ್ದಾರೆ. ಆದರೆ ಇದರ ಹಿಂದೆಯೂ ಕೂಡಾ ರಿಯಲ್ ಆದ ಅಪ್ಪಟ ವಿಷ್ಣು ಅಭಿಮಾನವಿದೆ ಅನ್ನೋದು ವಿಶೇಷ!
ಗಂಡುಗಲಿ ಎಂದೇ ಹೆಸರಾಗಿರೋ ನಿರ್ಮಾಪಕ ಕೆ. ಮಂಜು ವಿಷ್ಣುವರ್ಧನ್ ಅವರ ಆಪ್ತರಾಗಿದ್ದವರು. ಅದೆಷ್ಟೋ ವರ್ಷದ್ದು ಈ ಸಖ್ಯ. ಹೀಗೆ ತಂದೆಯ ಕಾರಣದಿಂದ ಸಾಹಸಸಿಂಹನ ಪ್ರಭಾವ ಬೆಳೆಸಿಕೊಂಡಿದ್ದ ಶ್ರೇಯಸ್ ಕೂಡಾ ನಿಜಜೀವನದಲ್ಲಿಯೂ ವಿಷ್ಣು ಅವರನ್ನು ಆರಾಧಿಸಲಾರಂಭಿಸಿದ್ದರು. ಪಡ್ಡೆಹುಲಿ ಚಿತ್ರದಲ್ಲಿರೋ ವಿಷ್ಣು ಪ್ರೇಮದ ತುಂಬಾ ವಾಸ್ತವದ ಈ ಛಾಯೆಯಿದೆ.
ತಮ್ಮ ಮಗನ ಮೊದಲ ಚಿತ್ರದಲ್ಲಿಯೂ ಕೆ ಮಂಜು ಅವರು ವಿಷ್ಣು ಅಭಿಮಾನವನ್ನು ಫಳ ಫಳಿಸುವಂತೆ ಮಾಡಿದ್ದಾರೆ. ಈ ಕಾರಣದಿಂದಲೇ ವಿಷ್ಣು ಮೇಲಿನ ಅಭಿಮಾನದ ಹಾಡುಗಳೂ ಹೊರ ಬಂದಿವೆ. ಈ ಮೂಲಕವೇ ಮರೆಯಾದ ಆ ಚೇತನಕ್ಕೆ ಅರ್ಥಪೂರ್ಣ ಗೌರವ ಸಲ್ಲಿಸಿದ ತೃಪ್ತಿ ಮಂಜು ಅವರಲ್ಲಿದೆ. ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ಹೇಗೆ ಅಭಿನಯಿಸಿದ್ದಾರೆಂಬುದನ್ನು ನೋಡಲು ಸಾಹಸ ಸಿಂಹನ ಅಭಿಮಾನಿ ಬಳಗ ಕಾತರಗೊಂಡಿದೆ.