Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಜೊತೆ ಬರ್ತ್ ಡೇ ಇಲ್ಲ ಎಂದಿದ್ದ ರಾಕಿಂಗ್ ಸ್ಟಾರ್ ಯಶ್ ಫ್ರೆಂಡ್ಸ್ ಜೊತೆ ಪಾರ್ಟಿ

Yash birthday

Krishnaveni K

ಬೆಂಗಳೂರು , ಬುಧವಾರ, 8 ಜನವರಿ 2025 (09:53 IST)
Photo Credit: X
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದಿದ್ದರು. ಹೀಗಾಗಿ ನಿನ್ನೆ ತಡರಾತ್ರಿ ತಮ್ಮ ಫ್ರೆಂಡ್ಸ್ ಜೊತೆ ಹುಟ್ಟುಹಬ್ಬದ ನಿಮಿತ್ತ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

Yash birthday
Photo Credit: X
ಕಳೆದ ವರ್ಷವೂ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ  ವರ್ಷವೂ ವಾರಕ್ಕೆ ಮುಂಚೆಯೇ ನಾನು ಶೂಟಿಂಗ್ ನಲ್ಲಿರುವ ಕಾರಣ ನಿಮ್ಮ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಪ್ರಕಟಣೆ ನೀಡಿದ್ದರು. ಯಶ್ ಹೀಗೆ ಹೇಳುವುದಕ್ಕೂ ಕಾರಣವಿತ್ತು.

ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರು ಅಭಿಮಾನಿಗಳು ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದು ಯಶ್ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಹೀಗಾಗಿಯೇ ಯಶ್ ಈ ಬಾರಿ ಅದ್ಧೂರಿ ಹುಟ್ಟುಹಬ್ಬದ ಆಚರಣೆ ಬೇಡ ಎಂದು ತೀರ್ಮಾನಿಸಿದ್ದರು.

ಹೀಗಾಗಿ ಶೂಟಿಂಗ್ ಸ್ಥಳದಲ್ಲಿಯೇ ತಮ್ಮ ಸ್ನೇಹಿತರು, ಪತ್ನಿ ರಾಧಿಕಾ, ಮಕ್ಕಳೊಂದಿಗೆ ತಡರಾತ್ರಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಸರಳವಾಗಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Yash Birthday: ಎಷ್ಟೇ ದೊಡ್ಡ ಸ್ಟಾರ್ ಆದ್ರೂ ರಾಕಿಂಗ್ ಸ್ಟಾರ್ ಯಶ್ ಗಿದೆ ಇದೊಂದು ಅಭ್ಯಾಸ